ಖಡಕ್ಕಾಗಿದೆ ಆಕ್ಷನ್ ಪ್ರಿನ್ಸ್ ಮಾರ್ಟಿನ್ ಹೇರ್ ಸ್ಟೈಲ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು ಸಹಜವಾಗಿ ಪ್ರೇಕ್ಷಕರಲ್ಲಿ ಈ ಹಿಟ್ ಕಾಂಬಿನೇಷನ್ ಬಗ್ಗೆ ಕುತೂಹಲ ಮೂಡಿದೆ …
ಈಗಾಗಲೇ ಪೋಸ್ಟರ್ ನಿಂದಲೇ ಸುದ್ದಿ ಆಗಿತ್ತು ಮಾರ್ಟಿನ್ ಸಿನಿಮಾ ..ಸದ್ಯ ಧ್ರುವ ಸರ್ಜಾರ ಹೊಸ ಹೇರ್ ಸ್ಟೈಲ್ ನಿಂದ ಮಾರ್ಟಿನ್ ಚಿತ್ರ ಮತ್ತೆ ಟ್ರೆಂಡಿಂಗ್ ನಲ್ಲಿದೆ ..ಮಾರ್ಟಿನ್ ಸಿನಿಮಾಗಾಗಿ ಧ್ರುವ ಸರ್ಜಾ ಹೊಸ ರೀತಿಯ ಹೇರ್ ಸ್ಟೈಲ್ ಟ್ರೈ ಮಾಡಿದ್ದು ಅಭಿಮಾನಿಗಳು ಈ ಹೊಸ ಲುಕ್ ಗೆ ಫಿದಾ ಆಗಿದ್ದಾರೆ ..
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಪ್ರಶಾಂತ್ ಈ ವಿಭಿನ್ನವಾದ ಹೇರ್ ಕಟಿಂಗ್ ಮಾಡಿದ್ದು ಸಣ್ಣ ಮಕ್ಕಳಂತೂ ಧ್ರುವ ಹೇರ್ ಕಟಿಂಗ್ ನೋಡಿ ಥ್ರಿಲ್ ಆಗಿದ್ದಾರೆ ..ಪ್ರತಿ ಸಿನಿಮಾ ಹಾಗೂ ತನ್ನದೇ ಆದ ರೀತಿಯಲ್ಲಿ ತಯಾರಿ ಮಾಡಿಕೊಳ್ಳುವ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಹೇರ್ ಸ್ಟೈಲ್ ನಿಂದ ಟ್ರೆಂಡ್ ಹುಟ್ಟುಹಾಕುತ್ತಿದ್ದಾರೆ …ಸಿನಿಮಾ ಹೀರೋಗಳಿಗೆ ಹೇರ್ ಸ್ಟೈಲ್ ನಿಂದಲೇ ಹೊಸ ರೀತಿಯ ಲುಕ್ ಕೊಡೋ ಪ್ರಶಾಂತ್ ಧ್ರುವ ಸರ್ಜಾ ಅವರಿಗೂ ಈ ಹಿಂದೆ ಎಂದಿಗೂ ಕಾಣಿಸಿಕೊಳ್ಳದ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುವಂತಹ ಕೇಶ ವಿನ್ಯಾಸವನ್ನು ಮಾಡಿದ್ದಾರೆ …ಸದ್ಯ ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಹೇರ್ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕಿದೆ …