ನಟ ದುನಿಯಾ ವಿಜಯ್ ತಂದೆ ಸಾವನಪ್ಪಿದ್ದಾರೆ …ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ವಿಜಯ್ ತಂದೆ ..ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು
ಎರಡು ದಿನದ ಹಿಂದೆ ಅಪ್ಪನನ್ನ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆ ಗೆ ಸೇರಿಸಿದ್ದರು ವಿಜಯ್…ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 7.30ಕ್ಕೆ ನಿಧನ ಹೊಂದಿದ್ದಾರೆ. ವಿಜಯ್ ತಂದೆ ರುದ್ರಪ್ಪ ಅವ್ರಿಗೆ 81ವರ್ಷ ವಯಸ್ಸಾಗಿತ್ತು…
ಕಳೆದ ಜುಲೈನಲ್ಲಿ ವಿಜಯ್ ತಾಯಿಯನ್ನ ಕಳೆದುಕೊಂಡಿದ್ರು..ಈಗ ತಂದೆಯವರನ್ನ ಕಳೆದುಕೊಂಡಿದ್ದು ವಿಜಿ ಕುಟುಂಬಸ್ಥರಿಗೆ ಅತೀ ವ ನೋವನುಂಟು ಮಾಡಿದೆ…ತಮ್ಮ ಸ್ವಂತ ಊರಾದ ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ವಿಜಯ್ ತಂದೆಯ ಅಂತ್ಯಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ….