ಸೆಲೆಬ್ರಿಟಿಗಳು ಇಂದು ಜನರಿಗೆ ತುಂಬಾ ಹತ್ತಿರವಾಗಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾ. ಹೌದು, ಸೋಶೊಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ವಿಷಯಗಳನ್ನು ಅಪ್ ಡೇಟ್ ಮಾಡಲು ಸಾಧ್ಯವಾಗಿದೆ. ಅಂದ ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವಂತಹ ಕನ್ನಡ ಕಿರುತೆರೆಯ ನಟನಾ ಮಣಿಯರು ಯಾರು ಎಂಬುದನ್ನು ನೋಡೋಣ.
ಅನುಶ್ರೀ- ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಟಿವಿ ಸೆಲೆಬ್ರಿಟಿಗಳಲ್ಲಿ ಅನುಶ್ರೀ ಮುಂಚೂಣಿಯಲ್ಲಿ ಇದ್ದಾರೆ. ಮಿಲಿಯನ್ ಫಾಲೋವರ್ಸ್ ಹೊಂದಿರುವ ಅನುಶ್ರೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರೂ ಆಗಿದ್ದಾರೆ.
ದೀಪಿಕಾ ದಾಸ್- ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ಹೆಚ್ಚು ಫಾಲೋವರ್ಸ್ ಹೊಂದಿದ ಕನ್ನಡ ಕಿರುತೆರೆಯ ನಟಿಯರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರಲು ದಿನದ 7 ಗಂಟೆಗಳ ಕಾಲ ಇನ್ಸ್ಟಾಗ್ರಾಮ್ ನಲ್ಲಿ ಕಳೆಯುತ್ತಿದ್ದೆ ಎಂದು ದೀಪಿಕಾ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾರೆ.
ವೈಷ್ಣವಿ- ಇತ್ತೀಚೆಗಷ್ಟೇ 1 ಮಿಲಿಯನ್ ಫಾಲೋವರ್ಸ್ ಹೊಂದಿರುವ ವೈಷ್ಣವಿ ಬ್ಯೂಟಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಹೊಸ ಹೊಸ ಸವಾಲುಗಳನ್ನು ಜನರಿಗೆ ನೀಡುವ ಮೂಲಕ ಸದಾ ಜನರ ಜೊತೆ ಸಂಪರ್ಕದಲ್ಲಿರುತ್ತಾರೆ.
ನಿವೇದಿತಾ ಗೌಡ- ನಿವೇದಿತಾ ಕೂಡಾ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ನಿವೇದಿತಾ ಅವರ ಖ್ಯಾತಿಗೆ ಸೋಶಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸಿದೆ. ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ.
ರಂಜನಿ ರಾಘವನ್- ಸದ್ಯದಲ್ಲೇ 1 ಮಿಲಿಯನ್ ತಲುಪಲಿರುವ ರಂಜನಿ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರಲು ಇಷ್ಟಪಡುತ್ತಾರೆ. ನಟನೆಯ ಮೂಲಕ ಮನೆ ಮಾತಾಗಿರುವ ರಂಜನಿ ಸಮಯ ಸಿಕ್ಕಾಗಲ್ಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ.
ನೇಹಾ ಗೌಡ- ಕನ್ನಡ ಕಿರುತೆರೆಯಲ್ಲಿ ಜನ ತುಂಬಾ ಇಷ್ಟ ಪಡುವ ನಟಿಯರಲ್ಲಿ ಒಬ್ಬರು. ಜನಪ್ರಿಯ ಟಿವಿ ನಟಿಯಾಗಿರುವ ನೇಹಾ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪ್ರೇಕ್ಷಕರ ಜೊತೆ ಸಂವಹನ ನಡೆಸಲು ಇಷ್ಟ ಪಡುತ್ತಾರೆ.
ಮೇಘಾ ಶೆಟ್ಟಿ- ಕಿರುತೆರೆಗೆ ಹೊಸಬರಾದರೂ ಕಡಿಮೆ ಅವಧಿಯಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿರುವ ಮೇಘಾ ಸೋಶಿಯಲ್ ಮೀಡಿಯಾದಲ್ಲಿದಲ್ಲಿಯೂ ಸದ್ದು ಮಾಡುತ್ತಿರುವುದು ನಿಜ.