ಅಪ್ಪು ಅಕಾಲಿಕ ಮರಣ ಇಡೀ ರಾಜ್ಯದ ಜನರನ್ನೇ ದುಖಃದ ಮಡಿಲೊಗೆ ತಳ್ಳಿದೆ..ಪುನೀತ್ ಇನ್ನಿಲ್ಲ ಅನ್ನೋದನ್ನ ಮರೆಯಲಾರದೆ ಅಭಿಮಾನಿಗಳು ಅಪ್ಪು ನಮ್ಮಲ್ಲಿಯೇ ಇದ್ದಾರೆ ಅನ್ನೋದನ್ನ ಭಿನ್ನ ವಿಭಿನ್ನ ರೀತಿಯಲಿ ತೋರಿಸಿಕೊಡುತ್ತಿದ್ದಾರೆ…
ಇತ್ತೀಚಿಗಷ್ಟೇ ಅಭಿಮಾನಿಯೊಬ್ಬರು ಅಪ್ಪು ಫೋಟೋ ಹಿಡಿದುಕೊಂಡು ಶಬರಿ ಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ…ಅಪ್ಪು ಫೋಟೋ ಜೊತೆ
ಅಯ್ಯಪ್ಪನ 18 ಮೆಟ್ಟಿಲು ಹತ್ತಿ ಎಲ್ಲರ ಗಮನ ಸೆಳೆದಿದ್ದಾರೆ…
ಪುನೀತ್ ಕೂಡ ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ರು..ಸಣ್ಣ ವಯಸ್ಸಿನಿಂದಲೂ ಮಾಲೆ ಹಾಕಿ ಅಣ್ಣ ಶಿವರಾಜ್ ಕುಮಾರ್ ಜೊತೆ ಶಬರಿಮಲೆಗೆ ತೆರಳುತ್ತಿದ್ರು..ರಾಜ್ ಕುಮಾರ್ ಜೊತೆಗೂ ಅಪ್ಪು ಶಬರಿ ಮಲೆ ಯಾತ್ರೆ ಮಾಡಿದ್ರು.ಈಗ ಅಭಿಮಾನಿಗಳು ಪುನೀತ್ ರ ಫೋಟೋ ಹಿಡಿದುಕೊಂಡು ಶಬರಿ ಮಲೆಗೆ ಹೋಗುತ್ತಿದ್ದಾರೆ….