Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ಕೊನೆಗೂ ನಿಗದಿಯಾಯ್ತು ಗಾಳಿಪಟ ಹಾರುವ ದಿನ

ಗಾಳಿಪಟ 2 ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಲಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಲೂಸಿಯಾ ಪವನ್ ನಟಿಸಿದ್ದಾರೆ. ಆಗಸ್ಟ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ.

2008ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡ ಗಾಳಿಪಟ ಚಿತ್ರದ ಭಾಗ ಎರಡು ಇದಾಗಿದ್ದು ಸಿನಿಮಾ ಬಿಡುಗಡೆಯ ಕುರಿತಾಗಿ ನಿರ್ದೇಶಕ ಯೋಗರಾಜ್ ಭಟ್ ” ಒಂದಿಷ್ಟು ಮೊಹಬ್ಬತ್ ಜೊತೆಗೆ ಒಂದಿಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರುತ್ತಿದ್ದೇವೆ. ಅದೇ ಹಳೆಯ ಅಕ್ಕರೆ ಹಾಗೂ ಪ್ರೀತಿ ಬಯಸುವ ಗಾಳಿಪಟ 2 ಚಿತ್ರ ತಂಡ”ಎಂದು ಈ ಹಿಂದೆ ಬರೆದುಕೊಂಡಿದ್ದರು.

ಈ ಸಿನಿಮಾ ಕೂಡ ಪ್ರೇಮ ಕಥೆ ಆಗಿದ್ದು ರಾಜೇಶ್ ಕೃಷ್ಣನ್ ಬದಲಿಗೆ ಪವನ್ ಕುಮಾರ್ ನಟಿಸಿದ್ದಾರೆ. ಮೊದಲ ಸಿನಿಮಾಕ್ಕಿಂತ ಈ ಸಿನಿಮಾ ಪ್ರೇಮ ಕಥೆ ಹಾಗೂ ಭಾವುಕತೆ ಹೊಂದಿದೆ ಎಂದು ಚಿತ್ರ ತಂಡ ಹೇಳಿದೆ.
ಇನ್ನು ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು, ಸೋನಾಲ್ ಮೊಂತೇರೊ, ವೈಭವಿ ಶಾಂಡಿಲ್ಯ , ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ನಟಿಸಿದ್ದಾರೆ.

Related posts

ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಗಟ್ಟಿಮೇಳ ಅಂಜಲಿ

Nikita Agrawal

ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

Nikita Agrawal

ಮದಗಜ ಚಿತ್ರದ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್!

Karnatakabhagya

Leave a Comment

Share via
Copy link
Powered by Social Snap