ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ ಬಿಡುಗಡೆಯಾಗಿ ಐವತ್ತು ದಿನ ಕಳೆದಿದೆ… ಸಿನಿಮಾ ಪ್ರೇಕ್ಷಕರ ಮನ ಗೆದ್ದಿದ್ದು ಐವತ್ತು ದಿನದ ಸಂಭ್ರಮದಲ್ಲಿ ಇಡೀ ಚಿತ್ರತಂಡ ಸಡಗರವನ್ನು ಆಚರಣೆ ಮಾಡುತ್ತಿದೆ…
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ಕಾಂಬಿನೇಷನ್ ತೆರೆ ಮೇಲೆ ಸಖತ್ತಾಗಿ ವರ್ಕ್ ಆಗಿದ್ದು ಚಮಕ್ ನಂತರ ಮತ್ತೆ ಸುನಿ ಗಣಿ ಪ್ರೇಕ್ಷಕರನ್ನ ಮೋಡಿ ಮಾಡುವುದರಲ್ಲಿ ಸಕ್ಸಸ್ ಕಂಡಿದ್ದಾರೆ ..ಸುನಿ ಡೈರೆಕ್ಷನ್ ಗಣೇಶ್ ಆಕ್ಟಿಂಗ್ ಎಲ್ಲವೂ ಸಖತ್ತಾಗಿ ವರ್ಕೌಟ್ ಆಗಿದ್ದು ಪ್ರೇಕ್ಷಕರು ಮತ್ತೊಮ್ಮೆ ಸುನಿ ಗಣಿ ಕಾಂಬಿನೇಷನ್ ಗೆ ಜೈಕಾರ ಹಾಕಿದ್ದಾರೆ …
ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸಿನಿಮಾ ಐವತ್ತು ದಿನ ಪೂರೈಸಿರುವ ಖುಷಿಯಲ್ಲಿ ಚಿತ್ರತಂಡ ಹಬ್ಬದ ಸಡಗರವನ್ನ ಆಚರಣೆ ಮಾಡುತ್ತಿದೆ…ಸದ್ಯ ಥಿಯೇಟರ್ ನಲ್ಲಿ ಶೇಕಡ ಐವತ್ತರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶವಿದ್ದರು ಸಖತ್ ಚಿತ್ರ ನೋಡಲು ಪ್ರೇಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ…