ಶರ್ಮಿಳಾ ಮಾಂಡ್ರೆಗೆ ಈ ವರ್ಷ ಹರುಷವೇ ಸರಿ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿ “ದಸರಾ” ಚಿತ್ರವನ್ನು ನಿರ್ಮಾಣ ಮಾಡುವುದರೊಂದಿಗೆ ನಾಯಕಿಯಾಗಿ ಸತೀಶ್ ನೀನಾಸಂ ಜೊತೆ ನಟಿಸುತ್ತಿದ್ದಾರೆ. ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿರುವ ಶರ್ಮಿಳಾ ಮಾಂಡ್ರೆ ಅವರಿಗೆ ಇದೇ ತರದ ಪಾತ್ರ ಗಾಳಿಪಟ ಚಿತ್ರದ ಮೊದಲ ಭಾಗದಲ್ಲಿ ನಟಿಸಲು 2008ರಲ್ಲಿ ಆಫರ್ ದೊರಕಿತ್ತು.
“ಹೆಚ್ಚಿನವರಿಗೆ ಈ ವಿಷಯದ ಬಗ್ಗೆ ತಿಳಿದಿಲ್ಲ. ಯೋಗರಾಜ್ ಭಟ್ ಸರ್ ಗಾಳಿಪಟ ಚಿತ್ರಕ್ಕೆ ನನಗೆ ಆಫರ್ ನೀಡಿದ್ದರು. ಆದರೆ ಈ ಸಮಯದಲ್ಲಿ ನಾನು ಬೇರೆ ಸಿನಿಮಾದಲ್ಲಿ ನಟಿಸುತ್ತಿದ್ದೆ. ಹೀಗಾಗಿ ಈ ಸಿನಿಮಾಕ್ಕೆ ಇಲ್ಲ ಎನ್ನಲೇಬೇಕಾಯಿತು. ಆ ನಿರ್ಧಾರವು ನನ್ನೊಂದಿಗೆ ಹಾಗೆ ಉಳಿದಿದೆ. ಯೋಗರಾಜ್ ಸರ್ ಹಾಗೂ ಗಣೇಶ್ ಸರ್ ಜೊತೆ ನಟಿಸುವ ಅವಕಾಶ ಸಿಕ್ಕಾಗ ಬೇಡ ಎಂದು ಹೇಳಲು ಸಾಧ್ಯವಿಲ್ಲ” ಎನ್ನುತ್ತಾರೆ.
ದಶಕದ ನಂತರ ಮತ್ತೆ ಅವರಿಬ್ಬರ ಜೊತೆ ಕೆಲಸ ಮಾಡುವ ಅವಕಾಶ ದೊರಕಿರುವುದಕ್ಕೆ ಸಂತೋಷ ಆಗುತ್ತಿದೆ. ಹಾಗೂ ಇದು ಉತ್ತಮ ಅನುಭವ. ಕೋವಿಡ್ ನಿಂದಾದ ಎಲ್ಲಾ ಸವಾಲುಗಳ ಹೊರತಾಗಿಯೂ ತಂಡ ಮುನ್ನುಗ್ಗಿತು ಮತ್ತು ಸಾಧಿಸಿತು” ಎಂದಿದ್ದಾರೆ.
ಗಾಳಿಪಟ 2 ಗಣೇಶ್, ದಿಗಂತ್, ಯೋಗರಾಜ್ ಭಟ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ಆಗಿದ್ದು ಅನಂತ್ ನಾಗ್ ಹಾಗೂ ರಂಗಾಯಣ ರಘು ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅಲ್ಲದೇ ವೈಭವಿ ಶಾಂಡಿಲ್ಯ , ಸಂಯುಕ್ತ ಮೆನನ್ ಕೂಡಾ ನಟಿಸಲಿದ್ದು ನಿರ್ದೇಶಕ ಪವನ್ ಕುಮಾರ್ ಬಾಯ್ಸ್ ಗ್ಯಾಂಗ್ ನ ಮೂರನೇ ಸದಸ್ಯರಾಗಿದ್ದಾರೆ. ನಿಶ್ವಿಕಾ ನಾಯ್ಡು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.