ನಟ ಹಾಗೂ ಸಚಿವ ಬಿ ಸಿ ಪಾಟೀಲ್ ಚಿತ್ರರಂಗದಿಂದ ದೂರ ಉಳಿದು ಸಾಕಷ್ಟು ವರ್ಷಗಳೇ ಕಳೆದಿವೆ ಆದರೆ ಸಿನಿಮಾ ಮೇಲಿನ ಪ್ರೀತಿ ಮಾತ್ರ ಕೌರವನಿಗೆ ಕಮ್ಮಿ ಆಗಿಲ್ಲ..ತಮ್ಮ ಮಗಳನ್ನ ಇಂಡಸ್ಟ್ರಿ ಗೆ ಇಂಟ್ರಡ್ಯೂಸ್ ಮಾಡುವ ಸಲುವಾಗಿ ಮೂರ್ನಾಲ್ಕು ವರ್ಷದ ಹಿಂದೆ ಹ್ಯಾಪಿ ನ್ಯೂ ಇಯರ್ ಅನ್ನೋ ಸಿನಿಮಾಗೆ ಬಂಡವಾಳ ಗೋತ್ರ ಜತೆಗೆ ತಮ್ಮ ಮಗಳಾದ ಸೃಷ್ಟಿ ಪಾಟೀಲ್ ರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದರು
ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಬಿ ಸಿ ಪಾಟೀಲ್ ಅವರು ಮತ್ತೆ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ …ಎಸ್ ಬಿ ಸಿ ಪಾಟೀಲ್ ಸಿನಿಮಾಗೆ ಬಂಡವಾಳ ಹಾಕಿದ್ದು ಚಿತ್ರದಲ್ಲಿ ಯಶಸ್ ಸೂರ್ಯ ನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ …ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಚಾಲೆಂಜಿಂಗ್*ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ..
ಈ ಚಿತ್ರವನ್ನ ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದು ಚಿತ್ರಕ್ಕೆ ಗರಡಿ ಎಂದು ಹೆಸರಿಡಲಾಗಿದೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಕೂಡ ಶುರುವಾಗಲಿದೆ ..ಅದಷ್ಟೇ ಅಲ್ಲದೆ ಸಿನಿಮಾದಲ್ಲಿ ಬಿ ಸಿ ಪಾಟೀಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇನ್ನು ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿರಲಿದೆ ಒಟ್ಟಾರೆ ರಾಜಕೀಯದಲ್ಲಿ ಬ್ಯುಸಿಯಾಗಿರುವ ಬಿಸಿಪಾಟೀಲ್ ಬಿಡುವು ಮಾಡಿಕೊಂಡು ಸಿನಿಮಾದಲ್ಲಿ ಅಭಿನಯಿಸುವುದರ ಜತೆಗೆ ಸಿನಿಮಾ ನಿರ್ಮಾಣದಲ್ಲೂ ಬ್ಯುಸಿಯಾಗಲಿದ್ದಾರೆ ….