ಮತ್ತೊಬ್ಬ ಸ್ಟಾರ್ ಗಳಿಂದ ಸ್ಪೂರ್ತಿ ಪಡೆದುಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಮಾತ್ರವಲ್ಲ ಇನ್ನೊಬ್ಬರ ಲುಕ್ ನನ್ನು ನಕಲಿ ಮಾಡಲು ಪ್ರಯತ್ನಿಸುತ್ತಾರೆ. ಈಗ ಕಿರುತೆರೆ ನಟ ಅಭಿಷೇಕ್ ದಾಸ್ ಈಗ ರವಿಚಂದ್ರನ್ ಅವರ ಲುಕ್ ನನ್ನು ಕಾಪಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರವಿಚಂದ್ರನ್ ಅವರ ರಣಧೀರ ಸಿನಿಮಾದ ಲುಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರ ರಣಧೀರ ಸಿನಿಮಾದ ಪಾತ್ರವನ್ನು ಇದು ನೆನಪಿಸುವಂತಿದೆ.

ಕಪ್ಪು ಪ್ಯಾಂಟ್ ಹಾಗೂ ಕಪ್ಪು ಸ್ಲೀವ್ ಲೆಸ್ ಟಿ ಶರ್ಟ್ ಧರಿಸಿ ಹಣೆಗೆ ಕೆಂಪು ಬ್ಯಾಂಡ್ ಕಟ್ಟಿದ್ದಾರೆ. ಈ ಮೂಲಕ ರವಿಚಂದ್ರನ್ ಅವರನ್ನು ಕಾಪಿ ಮಾಡಲು ಪ್ರಯತ್ನಿಸಿದ್ದಾರೆ. ಈ ಫೋಟೋ ಶೇರ್ ಮಾಡಿ “ರಣಧೀರ ಪುನರ್ಜನ್ಮ ಪಡೆಯುತ್ತಾನೆ” ಎಂದು ಬರೆದುಕೊಂಡಿದ್ದಾರೆ.

ಇದಲ್ಲದೇ ಇದೇ ಅವತಾರದಲ್ಲಿ ರಣಧೀರ ಸಿನಿಮಾದ ಶೀರ್ಷಿಕೆ ಗೀತೆಗೆ ಹೆಜ್ಜೆ ಹಾಕಿದ್ದಾರೆ ಅಭಿಷೇಕ್. ಸದ್ಯ ಗಟ್ಟಿ ಮೇಳ ಧಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರದಲ್ಲಿ ನಟಿಸುತ್ತಿರುವ ಅಭಿಷೇಕ್ ದಾಸ್ ಬೆಂಗಳೂರು ಬಾಯ್ಸ್ ಸಿನಿಮಾದ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.



