ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ ವಸಿಷ್ಠ ಆಗಿ ನಟಿಸುತ್ತಿರುವ ರಕ್ಷ್ ಅವರು ಪ್ರೊಡಕ್ಷನ್ ಹೌಸ್ ಶುರು ಮಾಡಿ ಒಂದು ವರುಷ ಕಳೆದಿದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ರಕ್ಷ್ ಸ್ಟುಡಿಯೋವೊಂದನ್ನು ಕೂಡಾ ಓಪನ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹೊಸ ಸ್ಟುಡಿಯೋವನ್ನು ಶಾಸ್ತ್ರೋಕ್ತವಾಗಿ ರಕ್ಷ್ ದಂಪತಿ ಉದ್ಘಾಟನೆ ಮಾಡಿದ್ದಾರೆ.
ಗಟ್ಟಿ ಮೇಳ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿರುವ ರಕ್ಷ್ ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕರಾಗಿದ್ದರು. ಸದ್ಯ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಎನಿಸಿಕೊಂಡಿರುವ ಈ ಧಾರಾವಾಹಿಯ ಪ್ರತಿ ಸಂಚಿಕೆಯೂ ಕುತೂಹಲಕಾರಿಯಾಗಿ ಸಾಗುತ್ತಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ.
ಇನ್ನು ರಕ್ಷ್ ಅವರ ಸ್ಟುಡಿಯೋ ಉದ್ಘಾಟನೆ ಸಮಾರಂಭದಲ್ಲಿ ಕಿರುತೆರೆಯ ಹಲವು ಕಲಾವಿದರು ಹಾಗೂ ಸ್ನೇಹಿತರು ಭಾಗಿಯಾಗಿದ್ದಾರೆ. ಸ್ಟುಡಿಯೋ ಸಖತ್ ರಾಯಲ್ ಆಗಿದ್ದು ಗೋಲ್ಡನ್ ಮರೂನ್ ಕಲರ್ ನಲ್ಲಿ ಕಂಗೊಳಿಸುತ್ತಿದೆ. ಒಟ್ಟಿನಲ್ಲಿ ಬಣ್ಣದ ಬದುಕಿನಲ್ಲಿ ಬದುಕು ರೂಪಿಸಿಕೊಂಡಿರುವ ರಕ್ಷ್ ಅವರ ನೂತನ ಪ್ರಯತ್ನಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.