ಭಾರತೀಯ ಸಿನಿಮಾರಂಗದ ಟಾಪ್ ಮೋಸ್ಟ್ ನಿರ್ದೇಶಕರ ಲೀಸ್ಟ್ ನಲ್ಲಿರುವ ಕನ್ನಡದ ಏಕೈಕ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ….ಹೌದು ಉಪ್ಪಿ ನಿರ್ದೇಶನ ಅಂದ್ರೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಾರೆ ..
ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಡ್ ನಿರ್ದೇಶಕ ಎಂದು ಕರೆಸಿಕೊಳ್ಳುವ ರಿಯಲ್ ಸ್ಟಾರ್ ಈಗ ತಮ್ಮ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ..ಇಷ್ಟು ದಿನ ಸಿನಿಮಾ ನೋಡಿ ಎಂಜಾಯ್ ಮಾಡಿದ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಈಗ ಉಪ್ಪಿ ಜತೆ ನಟಿಸುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ… ಹೌದು ಉಪ್ಪಿ ನಿರ್ದೇಶನದ ತಮ್ಮ ಮುಂದಿನ ಸಿನಿಮಾಗೆ ಕಲಾವಿದರ ಹುಡುಕಾಟ ಶುರುವಾಗಿದೆ ..14 -ರಿಂದ 60 ವಯಸ್ಸಿನ ನಟ ನಟಿಯರು ಉಪ್ಪಿ ಜತೆ ನಟಿಸುವುದಕ್ಕೆ ಚಾನ್ಸ್ ಗಿಟ್ಟಿಸಬಹುದು ..
ಇದಕ್ಕೆ ಮಾಡಬೇಕಾಗಿರುವುದಿಷ್ಟೆ ನೀವು ಅಭಿನಯ ಮಾಡಿರುವಂಥ 2ನಿಮಿಷದ ವಿಡಿಯೋವನ್ನು ಉಪ್ಪಿಯ upendraproductions@gmail.com ಐಡಿಗೆ ಇಮೇಲ್ ಮಾಡಬೇಕು.. ಮಾರ್ಚ್ 10 ರೊಳಗೆ ವಿಡಿಯೋನ ಕಲಳಿಸಿಕೊಡಬೇಕು.. ವೀಡಿಯೋ ನೋಡಿ ನಿಮ್ಮ ಅಭಿನಯ ಮೆಚ್ಚುಗೆಯಾದರೆ ಉಪ್ಪಿ ಜತೆ ಅವರ ನಿರ್ದೇಶನದ ಸಿನೆಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು …
ಅಂದಹಾಗೆ ಉಪ್ಪಿ ನಿರ್ದೇಶನ ಮಾಡಿ ನಟಿಸುತ್ತಿರುವ ಚಿತ್ರದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ…ಪೋಸ್ಟರ್ ರಿವೀಲ್ ಮಾಡಿ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟಿರುವ ಉಪೇಂದ್ರ ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಅಪ್ ಡೇಟ್ ನೀಡಲಿದ್ದಾರೆ….