ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ರಿಲೀಸ್ ಆಗಿ ಒಂದು ವರ್ಷ ಕಳೆದರೂ ಸಿನಿಮಾದ ಕ್ರೇಜ್ ಇನ್ನೂ ಹೋಗಿಲ್ಲ. ಈ ಸಿನಿಮಾದ ಯಶಸ್ಸಿಗೆ ಕಾರಣ ಏನೇ ಇರಬಹುದು ಅಥವಾ ಯಾರೇ ಇರಬಹುದು. ಆದರೆ ಇದೆಲ್ಲ ಸಾಧ್ಯವಾಗಿದ್ದು ಹೊಂಬಾಳೆ ಫಿಲ್ಮ್ಸ್ ಮೂಲಕ.
ಪರಭಾಷೆಗಳಲ್ಲಿಯೂ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಹೊಂಬಾಳೆ ಈಗ ಬಾಲಿವುಡ್ ಗೂ ಕಾಲಿಡುತ್ತಿದೆ. ಅಲ್ಲಿಯೂ ಚಿತ್ರ ನಿರ್ಮಾಣ ರೆಡಿಯಾಗಿದೆ. ಬಾಲಿವುಡ್ ನ ಸ್ಟಾರ್ ನಟನ ಜೊತೆ ಮಾತುಕತೆ ನಡೆಸಿದೆ. ಹೀಗಂತ ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನದಲ್ಲಿ ಹೇಳಿದ್ದಾರೆ.
“ನಾವು ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಹಿಂದಿ ಸಿನಿಮಾ ಮಾಡುವ ಯೋಜನೆ ಹೊಂದಿದ್ದೇವೆ. ಸರಿಯಾಗಿ ಹೊಂದಾಣಿಕೆ ಆದರೆ 3,4 ತಿಂಗಳಿನಲ್ಲಿ ಘೋಷಣೆ ಮಾಡುತ್ತೇವೆ. ಚರ್ಚೆ ಆರಂಭಿಕ ಹಂತದಲ್ಲಿ ಇದೆ”ಎಂದಿದ್ದಾರೆ.
ಹೊಂಬಾಳೆ ಸಂಸ್ಥೆ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದೆ ಎಂಬ ವಿಚಾರ ಹೊರ ಬರುತ್ತಿದ್ದ ಹಾಗೆ ಶಾರುಖ್ ಖಾನ್ ಹೆಸರು ಕೇಳಿ ಬರುತ್ತಿದೆ. ಸಿನಿಮಾಕ್ಕಾಗಿ ನಿರ್ದೇಶಕರನ್ನು ಹುಡುಕುತ್ತಿರುವುದಾಗಿ ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ಈಗಾಗಲೇ ತೆಲುಗಿನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿರುವ ಹೊಂಬಾಳೆ ತಮಿಳು ಹಾಗೂ ಮಲಯಾಳಂನಲ್ಲಿಯೂ ಚಿತ್ರ ಮಾಡುತ್ತಿದೆ.