ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳ ಪೈಕಿ 777 ಚಾರ್ಲಿ ಕೂಡಾ ಒಂದು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್ ನ ಈ ಸಿನಿಮಾವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ಇದೊಂದು ಭಾವನಾತ್ಮಕವಾದ ಸಿನಿಮಾವಾಗಿದ್ದು ಪ್ರಾಣಿಪ್ರಿಯರಿಗಂತೂ ಬಹಳ ಬೇಗ ಇದು ಕನೆಕ್ಟ್ ಆಗುತ್ತದೆ. ಸಿನಿಪ್ರಿಯರ ಜೊತೆಗೆ ಸೆಲೆಬ್ರಿಟಿಗಳ ತನಕ ಪ್ರತಿಯೊಬ್ಬರು ಚಾರ್ಲಿ ಯನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ನೋಡಿ ಕಣ್ಣೀರು ಸುರಿಸಿದ್ದರು.

ಇದೀಗ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಬ್ಯುಸಿ ಶೆಡ್ಯೂಲ್ ನ ನಡುವೆ 777 ಚಾರ್ಲಿಯನ್ನು ನೋಡಿದ್ದಾರೆ. ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ ಕಾಂಬಿನೇಷನ್ ಗೆ ಫಿದಾ ಆಗಿರುವ ನವರಸನಾಯಕ ಸಿನಿಮಾದ ಜೊತೆಗೆ ನವರಸನಾಯಕನನ್ನು ಕೊಂಡಾಡಿದ್ದಾರೆ. ಮಾತ್ರವಲ್ಲ ರಕ್ಷಿತ್ ಶೆಟ್ಟಿ ಕನ್ನಡದ ಅಮೀರ್ ಖಾನ್ ಎಂದು ಹೇಳಿದ್ದಾರೆ.


“777 ಚಾರ್ಲಿ ಸಿನಿಮಾ ನಿಜಕ್ಕೂ ಅದ್ಭುತವಾಗಿದೆ. ಎಷ್ಟೇ ಕಲ್ಲು ಹೃದಯದವರಾದರೂ ಈ ಸಿನಿಮಾ ನೋಡಿದ ತಕ್ಷಣ ಕರಗಿ ಹೋಗುತ್ತಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ವೀಕ್ಷಕರನ್ನು ಭಾವುಕರನ್ನಾಗಿಸುತ್ತದೆ” ಎಂದು ಹೇಳುತ್ತಾರೆ.

“ನಾನು ನನ್ನ ಜೀವನದಲ್ಲಿ ಇಲ್ಲಿಯ ತನಕ ನೋಡಿದ ಪ್ರಾಣಿಗಳ ಸಂಖ್ಯೆ ಬರೀ ಎರಡು. ಅದರಲ್ಲಿ ಒಂದು ಇಂಗ್ಲೀಷ್ ಸಿನಿಮಾ. ಮತ್ತೊಂದು ಚಾರ್ಲಿ. ಇಂಗ್ಲೀಷ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ನಾನು ಈ ರೀತಿಯಾದ ಸಿನಿಮಾವನ್ನು ಕನ್ನಡದಲ್ಲಿ ಯಾರು ಮಾಡಬಹುದು ಎಂದು ಕಾಯುತ್ತಿದ್ದೆ. ರಕ್ಷಿತ್ ಶೆಟ್ಟಿ ಅವರು ಅದನ್ನು ಮಾಡಿತೋರಿಸಿದ್ದಾರೆ” ಎಂದು ಹೇಳಿದ್ದಾರೆ ಜಗ್ಗೇಶ್.

“ಇನ್ನು ಪ್ರಾಣಿ ಪ್ರೇಮಿಗಳಂತೂ ಚಾರ್ಲಿ ಸಿನಿಮಾಕ್ಕೆ ಫಿದಾ ಆಗುವುದರಲ್ಲಿ ಸಂಶಯವಿಲ್ಲ. ರಕ್ಷಿತ್ ಶೆಟ್ಟಿ ಕನ್ನಡದ ಅಮೀರ್ ಖಾನ್ ಇದ್ದಂತೆ” ಎಂದು ರಕ್ಷಿತ್ ಶೆಟ್ಟಿಯನ್ನು ಕೊಂಡಾಡಿದ್ದಾರೆ ರಕ್ಷಿತ್ ಶೆಟ್ಟಿ.
