Karnataka Bhagya
Blogವಿದೇಶ

ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ 1 ಲಕ್ಷ ಬಹುಮಾನ ಕೊಟ್ಟ ಜಗ್ಗೇಶ್

ಬೆಂಗಳೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಮಿಂಚಿನ ವೇಗದಲ್ಲಿ ಬೇಧಿಸಿದ್ದುj, ಕೇವಲ 86 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೀಗಾಗಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಸರ್ಕಾರ ಪೊಲೀಸ್ ತಂಡಕ್ಕೆ 5 ಲಕ್ಷ ರೂ.ಬಹುಮಾನ ಘೋಷಿಸಿದೆ. ಇದರ ಬೆನ್ನಲ್ಲೇ ಇದೀಗ ನಟ ಜಗ್ಗೇಶ್ ಸಹ ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಕಾಮ ಪಿಪಾಸುಗಳನ್ನು ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ವೈಯಕ್ತಿಕ ಅಭಿನಂದನೆಗಳು. ಐ ಆ್ಯಮ್ ಪ್ರೌಡ್ ಆಫ್ ಮೈ ಸ್ಟೇಟ್ ಪೊಲೀಸ್, ಪ್ರಕರಣ ಬೇಧಿಸಿದ ನಲ್ಮೆಯ ಪೋಲಿಸರಿಗೆ ನನ್ನ ಕಡೆಯಿಂದ 1 ಲಕ್ಷ ರೂ. ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೇ ಮುಂದುವರಿಯಲಿ, ರಾಷ್ಟ್ರಕ್ಕೆ ಮಾದರಿ ನಮ್ಮ ಪೋಲಿಸ್ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದ ಜಗ್ಗೇಶ್, ಎಂಥ ಕ್ರೂರಿಗಳು, ತಾಯಿ ಹೆಣ್ಣಲ್ಲವೆ? ಅಕ್ಕ, ತಂಗಿ ಹೆಣ್ಣಲ್ಲವೆ? ಮಡದಿ ಹೆಣ್ಣಲ್ಲವೆ? ಹೆಣ್ಣು ಗೌರವಿಸದವರು ರಕ್ಕಸರು, ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು. ಈ ಕ್ರೂರ ಕೃತ್ಯಕ್ಕೆ ಖಂಡನೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದರು.

ಇದೀಗ ಪ್ರಕರಣ ಬೇಧಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ. ಈಗಾಗಲೇ ಪೊಲೀಸರ ಕಾರ್ಯ ಮೆಚ್ಚಿ ಸರ್ಕಾರ ತನಿಖಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೊಷಿಸಿದೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ತನಿಖೆ ನಡೆಸಿ ಆರೋಪಿಗಳ ಹಡೆಮುರಿ ಕಟ್ಟಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಸ್ಥಳದಲ್ಲಿ ಸಿಕ್ಕ ಬಿಯರ್ ಬಾಟ್ಲಿ, ತಳವಾಡಿಯ ಬಸ್ ಟಿಕೆಟ್ ಮತ್ತು ಯುವಕನ ಹೇಳಿಕೆ ಆಧರಿಸಿ ತನಿಖೆ ನಡೆಸಿದ್ದರು. ಘಟನೆ ನಡೆಯುವ ಮೂರು ದಿನಗಳ ಮುಂಚೆ ಮತ್ತು ಒಂದು ದಿನದ ಹಿಂದೆ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಘಟನಾ ಸ್ಥಳಕ್ಕೆ ಬಂದಿರುವುದನ್ನು ಕಾಮಕರು ಫಾಲೋ ಮಾಡಿದ್ದರು. ಘಟನೆ ನಡೆದ ದಿನದಿಂದ ಕಾಮುಕರು ಎಸ್ಕೇಪ್ ಆಗಿದ್ದರು, ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಬೆಂಗಳೂರಿನಲ್ಲಿ ಥ್ರಿಬ್ಬಲ್ ಆರ್ ತಂಡ -ಪ್ರೆಸ್ ಮೀಟ್ ಹೈಲೆಟ್ಸ್ ಇಲ್ಲಿದೆ

Nikita Agrawal

ವೇದಿಕೆ ಮೇಲೆಯೇ ಕಣ್ಣೀರಿತ್ತ ಶಿವಣ್ಣ

Nikita Agrawal

ಸಂಕ್ರಾಂತಿ ಸಂಭ್ರಮದಲ್ಲಿ ಝೈದ್ ಖಾನ್ ಹಾಗೂ ಸೋನಾಲ್

Nikita Agrawal

Leave a Comment

Share via
Copy link
Powered by Social Snap