ಅದಿತಿ ಪ್ರಭುದೇವ ಜೊತೆಯಲ್ಲಿ ಡಾಲಿ ಧನಂಜಯ್ “once upon a time in ಜಮಾಲಿಗುಡ್ಡ“. ಈಗಾಗಲೇ ಡಾಲಿ ಧನಂಜಯ್ ಅವರು ಅಭಿನಯಿಸಿರುವ ರತ್ನನ್ ಪ್ರಪಂಚ ಸಿನಿಮಾ ಒಟಿಟಿ ಯಲ್ಲಿ ರಿಲೀಸ್ ಆಗಿ ಯಶಸ್ಸನ್ನು ಕಂಡು ಡಾಲಿಯವರ ಪ್ರತಿಭೆ ಹಾಗೂ ಕೀರ್ತಿ ಎತ್ತರದಲ್ಲಿರುವಾಗಲೇ ಅವರು ಮತ್ತೊಂದು ಸಿನಿಮಾದ ಬಗ್ಗೆ ಸಮಾಚಾರವನ್ನು ಹಂಚಿಕೊಂಡಿದ್ದಾರೆ.
ಹೌದು ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಖ್ಯಾತಿಯ ಕುಶಲ್ ಗೌಡ ನಿರ್ದೇಶಿಸಿರುವ ಡಾಲಿ ದನಂಜಯ್ ಹಾಗೂ ಅದಿತಿ ಪ್ರಭುದೇವ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರ ‘once upon a time in ಜಮಾಲಿಗುಡ್ಡ‘ದ title poster ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.
ಆಗ ಎಡಕಲ್ಲುಗುಡ್ಡದ ಮೇಲೆ..ಈಗ ಜಮಾಲಿ ಗುಡ್ಡದ ಮೇಲೆ !
ಡಾಲಿಯವರ ಚಿತ್ರಗಳೆಂದರೆ ನೋಡಲೇಬೇಕು ಎಂಬ ಕುತೂಹಲವನ್ನು ಹುಟ್ಟುಹಾಕಿರುವ ಯಶಸ್ವೀ ನಟನಿಗೆ ಹಾಗೂ ಈ ಹೊಸ ಚಿತ್ರಕ್ಕೆ ಚಿತ್ರತಂಡಕ್ಕೆ All the very Best!