ಚಲನಚಿತ್ರರಂಗದಲ್ಲಿ ಸ್ನೇಹ ಎಂಬ ವಿಚಾರ ಬಂದಾಗ ನೆನಪಾಗುವ ಹೆಸರು ಕಿಚ್ಚ ಸುದೀಪ್. ಅದಕ್ಕೆ ಕಾರಣವೂ ಇದೆ. ಸ್ನೇಹದ ವಿಷಯಕ್ಕೆ ಬಂದರೆ ಬಿಟ್ಟುಕೊಡುವ ಜಾಯಮಾನದವರು ಅಲ್ಲ ಸುದೀಪ್. ಸ್ನೇಹ ಅಂತ ಬಂದರೆ ಗಟ್ಟಿಯಾಗಿ ನಿಲ್ಲುವ ಅವರು ಸ್ನೇಹಿತರಿಗೆ ಕಷ್ಟ ಎಂದರೆ ಸಾಕು ಏನು ಬೇಕಾದರೂ ಮಾಡುತ್ತಾರೆ.
ಇನ್ನು ಎಲ್ಲದಕ್ಕಿಂತಲೂ ಮುಖ್ಯವಾಗಿ
ನೆಚ್ಚಿನ ಸ್ನೇಹಿತರಿಗೆ ಏನು ಬೇಕು ಎಂಬುದನ್ನು ಅರಿತುಕೊಂಡು ಅವರಿಗೆ ಅಗತ್ಯವಿರುವಂತಹ ಉಡುಗೊರೆಗಳನ್ನು ನೀಡುತ್ತಾರೆ. ಇದೀಗ ಈ ಮಾತು ಯಾಕೆ ಬಂತು, ಕಿಚ್ಚ ಸುದೀಪ್ ಅವರು ಅದ್ಯಾರಿಗೆ ಉಡುಗೊರೆ ನೀಡಿದ್ದಾರೆ ಎಂಬ ನಿಮ್ಮ ಕುತೂಹಲಕ್ಕೆ ಇದೀಗ ಉತ್ತರ ಸಿಗಲಿದೆ. ವಿಕ್ರಾಂತ್ ರೋಣ ಸಿನಿಮಾದ ನೃತ್ಯ ನಿರ್ದೇಶಕರಿಗೆ ಥಾರ್ ಜೀಪು ನೀಡಿದ್ದಾರೆ.
ತಮ್ಮ ಮುಂದಿನ ಸಿನಿಮಾ ವಿಕ್ರಾಂತ್ ರೋಣದ
ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ. ಥಾರ್ ಜೀಪು ಅನ್ನು ಕಿಚ್ಚ ಸುದೀಪ್ ಅವರಿಂದ ಪಡೆದಿರುವ ಜಾನಿ ಮಾಸ್ಟರ್ ಇನ್ ಸ್ಟಾಗ್ರಾಂ ಮೂಲಕ ತಿಳಿಸಿದ್ದು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ.
“ಕಿಚ್ಚ ಸುದೀಪ್, ನೀವು ನೀಡಿರುವಂತಹ ಈ ಉಡುಗೊರೆಗಾಗಿ ಧನ್ಯವಾದಗಳು. ನನ್ನನ್ನು ನೀವು ನನ್ನನ್ನು ನೋಡಿಕೊಳ್ಳುವ ರೀತಿಗೆ ನಾನು ಸದಾ ಚಿರ ಋಣಿ. ನಾನು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ” ಎಂದು ಜಾನಿ ಮಾಸ್ಟರ್ ಸಂತಸ ವ್ಯಕ್ತಪಡಿಸಿಕೊಂಡಿದ್ದಾರೆ.
ಈ ಹಿಂದೆ ಅನೂಪ್ ಭಂಡಾರಿ ಅವರ 40ನೇ ವರ್ಷದ ಹುಟ್ಟುಹಬ್ಬಕ್ಕೆ ಎಸ್ ಯುವಿ ಕಾರ್ ನ್ನು ಗಿಫ್ಟ್ ನೀಡಿದ್ದರು