Karnataka Bhagya

ನಟನೆಯ ನಂತರ ಇದೀಗ ಯೂಟ್ಯೂಬ್ ಗೆ ಕಾಲಿಟ್ಟ ಅಮ್ಮಮ್ಮ

ಇಂದು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದು ಹೊಸತೇನಲ್ಲ. ಈ ಮೂಲಕ ಜನರನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಹೀಗಾಗಿ ಅನೇಕ ಮಂದಿ ಕಲಾವಿದರು ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ತಮ್ಮ ಚಟುವಟಿಕೆಗಳನ್ನು ಜನರಿಗೆ ಮುಟ್ಟಿಸಲು ಇದು ನೆರವಾಗುತ್ತದೆ. ಈಗ ಕನ್ನಡ ಸಿನಿಮಾ ರಂಗದ ಮತ್ತೋರ್ವ ಕಲಾವಿದೆ ಯೂಟ್ಯೂಬ್ ಚಾನೆಲ್ ಶುರು ಮಾಡುತ್ತಿದ್ದಾರೆ.

ಕನ್ನಡತಿ ಧಾರಾವಾಹಿಯಲ್ಲಿ ರತ್ನಮಾಲಾ ಆಲಿಯಾಸ್ ಅಮ್ಮಮ್ಮ ಪಾತ್ರದಲ್ಲಿ ಮಿಂಚಿದ್ದ ಚಿತ್ಕಲಾ ಬಿರಾದಾರ್ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಿದ್ದಾರೆ. ಅಂದ ಹಾಗೇ ಅವರ ಯೂ ಟ್ಯೂಬ್ ಚಾನೆಲ್ ಇದೇ ಮಾರ್ಚ್ 8 ರಂದ ಆರಂಭವಾಗಲಿದೆ. ಇದರಲ್ಲಿ ಚಿತ್ಕಲಾ ಅವರು ಸಂಬಂಧ, ಅವರ ಜೀವನಾನುಭವ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ. ಈ ಹೊಸ ಪ್ರಯಾಣಕ್ಕೆ ನಿಮ್ಮ ಸಾಥ್ ಬೇಕು, ಹರಕೆ ಹಾರೈಕೆ ಬೇಕು ಎಂದಿದ್ದಾರೆ” ಚಿತ್ಕಲಾ ಬಿರಾದಾರ್.

ಕನ್ನಡತಿ ಧಾರಾವಾಹಿಯ ಅಮ್ಮಮ್ಮ ಆಗಿ ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಚಿತ್ಕಲಾ ಅವರು ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುಚ ವಿಚಾರ ಹಲವರಿಗೆ ಗೊತ್ತಿಲ್ಲ! ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಈಕೆ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು.

ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರದಲ್ಲಿ ಬಂದ ಈಕೆ ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ನೂರೆಂಟು ಸುಳ್ಳು, ಬಾ ನನ್ನ ಸಂಗೀತ, ಮಾನಸ ಸರೋವರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಅಮ್ಮಮ್ಮನಾಗಿ ಮೋಡಿ ಮಾಡುತ್ತಿರುವ ಈಕೆಯ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ, ಬದಲಿಗೆ ಹಿರಿತೆರೆಯಲ್ಲೂ ಈಕೆ ಮಿಂಚಿದ ಪ್ರತಿಭೆ.

ಮದುವೆ ಮನೆ, ಸಂತು ಸ್ಟ್ರೇಟ್ ಫಾರ್ವರ್ಡ್, ಬಜಾರ್, ನರಗುಂದ ಬಂಡಾಯ, ಹಗಲುಕನಸು, ಮಾಯಾ ಬಜಾರ್, ಏನೆಂದು ಹೆಸರಿಡಲಿ, ತ್ರಿಬ್ಬಲ್ ರೈಡಿಂಗ್, ವಿಕ್ರಾಂತ್ ರೋಣ, ಯುವರತ್ನ, ಕಾಲಚಕ್ರ, ರಾಗಭೈರವಿ, ಪ್ರೇಮಂ ಪೂಜ್ಯಂ, ಸ್ಟೀಲ್ ಪಾತ್ರೆ ಸಾಮಾನು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap