ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜಿನಿ ರಾಘವನ್ ಪಾತ್ರವನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿರುವ ರಂಜಿನಿ “ಕನ್ನಡತಿ ನನ್ನ ಹೃದಯಕ್ಕೆ ಹತ್ತಿರವಾದ ಧಾರಾವಾಹಿ. ನನಗೆ ಈ ಧಾರಾವಾಹಿಯು ಉದ್ಯೋಗ ತೃಪ್ತಿ ನೀಡಿದೆ. ಜೊತೆಗೆ ಇದು ನನ್ನ ದಿನಚರಿಯಾಗಿಬಿಟ್ಟಿದೆ.ಈ ಧಾರಾವಾಹಿಯ ಭಾಗವಾಗಿರುವುದಕ್ಕೆ ನನಗೆ ಸಂತಸವಿದೆ”ಎಂದಿದ್ದಾರೆ.
“ನನ್ನ ಪಾತ್ರ ಭುವಿ ಯಾವುದೇ ವಯಸ್ಸಿನ ಹಂಗಿಲ್ಲದೇ ಎಲ್ಲರಿಗೂ ಇಷ್ಟವಾಗಿದೆ. ವೀಕ್ಷಕರಿಂದ ತುಂಬಾ ಪ್ರೀತಿಯನ್ನು ಗಳಿಸುವುದು ಅತಿವಾಸ್ತವಿಕ ಭಾವನೆಯಾಗಿದೆ. ಭುವಿ ಪಾತ್ರ ವೀಕ್ಷಕರಿಗೆ ಇಷ್ಟು ಹತ್ತಿರವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ” ಎಂದಿದ್ದಾರೆ.
“ಧಾರಾವಾಹಿಯ ಭಾಗವಾಗಿ ಹಾಗೂ ಯುವಕರ ಹೃದಯ ಗೆಲ್ಲುವುದು ಸುಲಭದ ಕೆಲಸವೇನಲ್ಲ. ಯುವಕರು ಅವರ ಇಷ್ಟ ಹಾಗೂ ಇಷ್ಟಪಡದಿರುವುದರ ಬಗ್ಗೆ ತುಂಬಾ ಆಯ್ಕೆ ಮಾಡುತ್ತಾರೆ. ಅವರು ನನ್ನ ಭುವಿ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ಕಥೆಯ ನಿರೂಪಣೆ ಯುವಜನತೆಗೆ ಸಂಬಂಧಿಸಿದಂತೆ ಇದೆ ಅನಿಸುತ್ತದೆ. ಧಾರಾವಾಹಿಯಲ್ಲಿ ಅಸ್ವಾಭಾವಿಕ ಘಟನೆ ಅಥವಾ ದೃಶ್ಯಗಳು ಇಲ್ಲ. ಯುವಜನತೆಗೆ ಇದನ್ನು ಇಷ್ಟಪಡುತ್ತಾರೆ” ಎಂದಿದ್ದಾರೆ ರಂಜಿನಿ.
ಕನ್ನಡತಿಯ ಭುವಿ ಹಾಗೂ ಹರ್ಷ ಪಾತ್ರ ಇತ್ತೀಚೆಗೆ ಜನ ಇಷ್ಟಪಡುವ ಜೋಡಿಗಳಾಗಿದ್ದಾರೆ. ಇದರ ಬಗ್ಗೆ ಮಾತನಾಡಿರುವ ರಂಜಿನಿ ” ನಾನು ಹೊರಗಡೆ ಹೋದಾಗ ಯುವಜನತೆ ಅಥವಾ ಮಧ್ಯಮ ವಯಸ್ಸಿನ ಜನ ಅಥವಾ ಹಿರಿಯರು ಎಲ್ಲರೂ ಕೇಳುವ ಪ್ರಶ್ನೆ “ಹರ್ಷ ಎಲ್ಲಿ?”. ಒಂದೆರಡು ಬಾರಿ ಅಲ್ಲ ಇದು ಹಲವು ಬಾರಿ ನಡೆದಿವೆ. ಹರ್ಷ ಹಾಗೂ ಭುವಿ ಜೊತೆಯಾಗಿ ಹೋಗಬೇಕೆಂದು ಜನ ಬಯಸುತ್ತಾರೆ. ನಮ್ಮ ಆನ್ ಸ್ಕ್ರೀನ್ ಪಾತ್ರ ಜನರಿಂದ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ” ಎಂದಿದ್ದಾರೆ
ಇನ್ನೊಂದು ಸನ್ನಿವೇಶವನ್ನು ಹಂಚಿಕೊಂಡಿರುವ ರಂಜಿನಿ” ನಾನು ಇತ್ತೀಚೆಗೆ ಒಂದು ಮದುವೆಗೆ ತೆರಳಿದ್ದಾಗ ಜನ ನನ್ನನ್ನು ನೋಡಿದರು. ನೀವ್ಯಾಕೆ ಹರ್ಷನ ಜೊತೆಯಲ್ಲಿ ಕರೆದುಕೊಂಡು ಬರಲಿಲ್ಲ ಎಂದು ಕೇಳಿದರು. ನನಗೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ಹೇಳಿದೆ. ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚಾಗಿದೆ”ಎಂದಿದ್ದಾರೆ.
ಕನ್ನಡತಿ ಎರಡು ವರ್ಷ ಪೂರೈಸಿರುವ ಕುರಿತು ಮಾತನಾಡಿರುವ ರಂಜಿನಿ ” ಕನ್ನಡತಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ ಎಂಬುದನ್ನು ನಂಬಲಾಗುತ್ತಿಲ್ಲ. ಆರಂಭದಿಂದ ಈಗಿನ ಕಥೆಯವರೆಗೂ ತುಂಬಾ ದೂರ ಬಂದಿದೆ ಹಾಗೂ ವೀಕ್ಷಕರನ್ನು ಇನ್ನೂ ರಂಜಿಸಲಿದೆ. ನಾನು ಮಾತ್ರವಲ್ಲ ನಮ್ಮ ಇಡೀ ಕನ್ನಡತಿ ತಂಡ ನಮ್ಮ ಅತ್ಯುತ್ತಮವಾದದನ್ನು ನೀಡುತ್ತಿದ್ದೇವೆ. ಕನ್ನಡತಿಯ ಪ್ರತಿಯೊಂದು ಪಾತ್ರವೂ ಪ್ರತಿ ದೃಶ್ಯಗಳಲ್ಲಿ ಉತ್ತಮವಾದ ಕೊಡುಗೆಯನ್ನು ನೀಡುತ್ತಿದೆ. ನಮ್ಮ ಕೆಲಸಕ್ಕೆ ನಾವು ನ್ಯಾಯ ಕೊಡುತ್ತಿದ್ದೇವೆ.ವೀಕ್ಷಕರೂ ಸ್ವೀಕರಿಸಿದ್ದಾರೆ. ಕಥೆ ಯಾವಾಗಲೂ ರಿಯಾಲಿಟಿಗೆ ಗಮನ ನೀಡುತ್ತಿದೆ” ಎಂದಿದ್ದಾರೆ.