Karnataka Bhagya
Blogರಾಜಕೀಯ

ಕನ್ನಡತಿಯ ನಾಯಕ ಈಗ ಭರ್ಜರಿ ಗಂಡು

ಕಿರುತೆರೆ ಲೋಕದಲ್ಲಿ ಕನ್ನಡತಿ ಧಾರಾವಾಹಿ ಮೂಲಕ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಮುಂದಿನ ಸಿನಿಮಾ”ಭರ್ಜರಿ ಗಂಡು”.

ಇದೇ ಸಿನಿಮಾ‌ ಈ ಮೊದಲು ” ಬಹದ್ದೂರ್ ಗಂಡು” ಎಂಬ ಹೆಸರಿನಿಂದ ಆರಂಭವಾಗಿ ಈಗ “ಭರ್ಜರಿ ಗಂಡು” ಎಂದು ಬದಲಾಗಿದೆ.‌

ಕಿರಣ್ ರಾಜ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇನ್ನಷ್ಟು ಸ್ಲಿಮಾಗಿ ಕಾಣಿಸಿಕೊಂಡಿದ್ದಾರೆ. ದೊಣ್ಣೆ ವರಸೆ ಮುಂತಾದ ಸಾಹಸ ವಿದ್ಯೆಗಳ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ಅವರು ಎರಡು ಲುಕ್ ಗಳಲ್ಲಿ ಗಮನ‌ ಸೆಳೆಯಲಿದ್ದು ಎರಡು ರೀತಿಯ ಪಾತ್ರಗಳಿಗೂ ಬೇಕಾದ ಪೂರ್ವ ತಯಾರಿ ಮಾಡಿಕೊಂಡು ಸೈ ಅನಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ಜಲಕ್ ನೋಡಿಯೇ ಕಿರಣ್ ರಾಜ್ ಅವರಿಗೆ ಸಾಕಷ್ಟು ಆಫರ್ ಬರುತ್ತಿದೆ.

ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ‌ಚಿತ್ರೀಕರಣ ಬಹುತೇಕ ಮುಗಿದಿದೆ. ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಸುಮಧುರ ಹಾಡುಗಳಿಗೆ ಗುಮ್ಮಿನೇನಿ‌ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ‌ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ.

ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ನಟಿಸಿದ್ದಾರೆ…ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts

ವಿಲನ್ ಆಗಿ ಕಿರುತೆರೆಯತ್ತ ಮರಳಿದ ಅಮೃತಾ ರಾಮಮೂರ್ತಿ

Nikita Agrawal

ಲವ್ ಯೂ ರಚ್ಚು ಕಾಂಟ್ರುವರ್ಸಿ- ಅಜಯ್ ರಾವ್ ಹಾಗು ಗುರುದೇಶಪಾಂಡೆ ಮಧ್ಯೆ ಮನಸ್ಥಾಪ

Nikita Agrawal

ಕನ್ನಡತಿ ಹೃದಯಕ್ಕೆ ಹತ್ತಿರವಾದ ಧಾರಾವಾಹಿ – ರಂಜನಿ ರಾಘವನ್

Nikita Agrawal

Leave a Comment

Share via
Copy link
Powered by Social Snap