ಹಿಂದಿ ಟಿವಿ ಮಾರುಕಟ್ಟೆಯಲ್ಲಿ ಕಪಿಲ್ ಶರ್ಮ ಶೋ ಗೆ ತನ್ನದೇ ಆದ ಸ್ಥಾನವಿದೆ. ಹಾಸ್ಯದಿಂದ ಪ್ರೇಕ್ಷಕರ ಮನಗೆದ್ದಿರುವ ಈ ಶೋ ಟಾಪ್ ಸ್ಥಾನದಲ್ಲಿ ಇದೆ. ಹಿಂದಿ ಕಿರುತೆರೆ ಜಗತ್ತಿನಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿದ್ದ ಈ ಶೋ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
ಹಿಂದಿಯ ಜನಪ್ರಿಯ ಶೋ ಗಳ ಪೈಕಿ ಒಂದಾಗಿರುವ ಇದು ಸ್ಥಗಿತಗೊಳ್ಳುತ್ತಿರುವುದು ಜನರ ಮನದಲ್ಲಿ ಅಚ್ಚರಿ ಮೂಡಿಸಿದೆ. ಅಂದ ಹಾಗೇ ಈ ಶೋ ಸ್ಥಗಿತಗೊಳ್ಳುತ್ತಿರುವುದು ಕೆಲವು ದಿನಗಳ ಕಾಲ ಮಾತ್ರ. ಶೋ ವಿನ ಕ್ಯಾಪ್ಟನ್ ಕಪಿಲ್ ಶರ್ಮ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಕಾರಣದಿಂದ ಶೋ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
ನಿರೂಪಕ ಕಪಿಲ್ ಶರ್ಮ ವಿದೇಶದಲ್ಲಿ ಲೈವ್ ಪ್ರದರ್ಶನ ನೀಡಲು ಹೋಗುತ್ತಿದ್ದಾರೆ. ಬಲು ಬೇಡಿಕೆ ಹೊಂದಿರುವ ಕಪಿಲ್ ಶರ್ಮ ಮುಂದಿನ ದಿನಗಳಲ್ಲಿ ಕೆನಡಾ, ಅಮೆರಿಕ ಸೇರಿದಂತೆ ಹಲವು ಕಡೆಗಳಲ್ಲಿ ಶೋ ನಡೆಸಿಕೊಡಲಿದ್ದಾರೆ.
ಇನ್ನು ನಿರೂಪಣೆಯ ಹೊರತಾಗಿ ನಟನೆಯಲ್ಲಿಯೂ ಗುರುತಿಸಿಕೊಂಡಿರುವ ಕಪಿಲ್ ಸದ್ಯ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಶೂಟಿಂಗ್ ನಲ್ಲಿಯೂ ಭಾಗವಹಿಸಬೇಕಾಗಿದೆ. ಆದ ಕಾರಣ ಶೋ ತಾತ್ಕಾಲಿಕವಾಗಿ ಈ ಶೋ ವನ್ನು ಸ್ಥಗಿತಗೊಳಿಸಲಾಗಿದೆ.
ಈ ಹಿಂದೆ ಶೋ ಸ್ಥಗಿತವಾಗಿದ್ದಾಗ ಕಪಿಲ್ ಅವರ ಬದಲಿಗೆ ಅರ್ಷದ್ ವಾರ್ಸಿ ಹಾಗೂ ಇನ್ನು ಕೆಲವರು ಶೋ ಮುಂದುವರಿಸಿದ್ದರು. ಆದರೆ ಈ ಬಾರಿ ಬೇರೆಯವರಿಗೆ ಶೋ ಜವಾಬ್ದಾರಿ ನೀಡದೆ ಇರಲು ನಿರ್ಧರಿಸಿದ್ದಾರೆ.