1-ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಸೀಮಿತವಾಗಿರುವ ಅತಿಥಿಗಳನ್ನ ಮಾತ್ರ ಆಹ್ವಾನ ಮಾಡಲಾಗಿದೆ…ಮದುವೆಯಲ್ಲಿ ಮೊಬೈಲ್ ಬಳಸುವಂತಿಲ್ಲ ಸೆಲ್ಫಿ ತೆಗೆಯುವಂತಿಲ್ಲ ಹಾಗೂ ಯಾವುದೇ ರೀತಿಯ ವೀಡಿಯೋಗಳನ್ನ ಮಾಡುವಂತಿಲ್ಲ* ..
2-ವಿಕಿ ಕೌಶಲ್ ಹಾಗೂ ಕತ್ರಿನಾ ಮದುವೆಯ ವಿಡಿಯೋ ಹಕ್ಕನ್ನು ಓಟಿಟಿಗೆ ಮಾರಾಟವಾಗಿದ್ದು…ತಮ್ಮ ಮದುವೆ ವಿಡಿಯೋವನ್ನ ನೂರು ಕೋಟಿಗೆ ಮಾರಾಟ ಮಾಡಿದ್ದಾರೆ ಅನ್ನೊ ಸುದ್ದಿ ಜೋರಾಗಿದೆ…
3-ಈಗಾಗಲೇ ಕೋರ್ಟ್ ಮದುವೆ ಮುಗಿಸಿರೋ ಜೋಡಿ ಡಿಸೆಂಬರ್ 9ರಂದು ರಾಜಸ್ತಾನದ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ರೆಸಾರ್ಟ್ನಲ್ಲಿ ನಡೆಯಲಿದೆ…
4-ಕತ್ರಿನಾ ಹಾಗೂ ವಿಕ್ಕಿ ಮದುವೆಯಲ್ಲಿ ಫೈವ್ ಟೇರ್ ನ ಇಟಾಲಿಯನ್ ಸ್ಟೈಲ್ ಕೇಕ್ ಕಟ್ ಮಾಡಲಿದ್ದಾರೆ…
5-ವಿಕ್ಕಿ ಹಾಗೂ ಕತ್ರಿನಾ ಮಧ್ಯೆ ಐದು ವರ್ಷ ಅಂತರವಿದ್ಸು ವಿಕ್ಕಿ ಕೌಶಲ್ ಕತ್ರಿನಾಗಿಂದ ಐದು ವರ್ಷ ಚಿಕ್ಕವರು
6-ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ವಿಶೇಷ ಏನೆಂದರೆ, ಮದುಮಗ ವಿಕ್ಕಿ ಕೌಶಲ್ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರಂತೆ..
7-ಮದುವೆ ವಿಡಿಯೋ ಲೀಕ್ ಆಗಬಾರದು ಅನ್ನೋ ನಿಟ್ಟಿನಲ್ಲಿ ಮದುವೆ ನಡೆಯುವ ಹೋಟೆಲ್ ಸುತ್ತಮುತ್ತ ಯಾವುದೇ ಡ್ರೋನ್ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
8-ವಿಕ್ಕಿ ಹಾಗೂ ಕ್ಯಾಟ್ ಮದುವೆ ಎರಡು ಸಂಪ್ರದಾಯದಲ್ಲಿ ನಡೆಯಲಿದ್ದು ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಲ್ಲಿ ವಿವಾಹ ಜರುಗಲಿದೆ…
9-ಕತ್ರಿನಾ ಕೈಫ್ ಮದುವೆಗೆ ತನ್ನ ಪರ್ಸನಲ್ ಬಾಡಿಗಾರ್ಡ್ ಅನ್ನು ಕಳುಹಿಸಿಕೊಟ್ಟಿದ್ದಾರೆ ನಟ ಸಲ್ಮಾನ್ ಖಾನ್
10-ಕತ್ರಿನಾ ಮತ್ತು ವಿಕ್ಕಿ ಮದುವೆಗಾಗಿ ರಾಜಸ್ಥಾನದ ಚೌತ್ ಮಠ ದೇಗುಲದ ದಾರಿಯಲ್ಲಿ ವಾಹನ ಸಂಚಾರಕ್ಕೂ ತಡೆ ಒಡ್ಡಲಾಗಿದೆ. ಇದನ್ನು ಖಂಡಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ, ನಟ-ನಟಿಯ ವಿರುದ್ಧ ದೂರೂ ದಾಖಲಾಗಿದೆ
.