ನಟಿ ಕಾವ್ಯಾ ಗೌಡ ಗೆ ಕೂಡಿ ಬಂತು ಕಂಕಣ ಭಾಗ್ಯ
ಸ್ಯಾಂಡಲ್ ವುಡ್ ನ ಮುದ್ದು ಮುಖದ ಚೆಲುವೆ ನಟಿ ಕಾವ್ಯಗೌಡ ಹಸೆಮಣೆ ಏರಲು ಸಿದ್ಧರಾಗಿದ್ದಾರೆ …ಗಾಂಧಾರಿ. ಶುಭವಿವಾಹ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟಿ ಕಾವ್ಯಾ ಗೌಡ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ…ಸಾಕಷ್ಟು ದಿನಗಳ ಹಿಂದೆಯೇ ಸ್ಮಾಲ್ ಸ್ಕ್ರೀನ್ ಗೆ ಗುಡ್ ಬೈ ಹೇಳಿದ್ದ ಕಾವ್ಯಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿ ಇದ್ದರು …ಸದ್ಯ ಮದುವೆ ತಯಾರಿಯಲ್ಲಿರುವ ಕಾವ್ಯ ಡಿಸೆಂಬರ್ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ …
ಬೆಂಗಳೂರು ಮೂಲದ ಬಿಸ್ನೆಸ್ ಮನ್ ಸೋಮಶೇಖರ್ ಜೊತೆ ಸಪ್ತಪದಿ ತುಳಿಯಲು ಕಾವ್ಯಾಗೌಡ ಸಿದ್ಧರಾಗಿದ್ದು ಇತ್ತೀಚಿಗಷ್ಟೆ ಬ್ಯಾಚುಲರ್ಸ್ ಪಾರ್ಟಿಯನ್ನ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ ..ಇದೇ ವರ್ಷ ಮೇ ತಿಂಗಳಲ್ಲಿ ಕಾವ್ಯ ಹಾಗೂ ಸೋಮಶೇಖರ್ ಅವರ ವಿವಾಹ ನಿಶ್ಚಯವಾಗಿತ್ತು ಆದರೆ ಕೋವಿಡ್ ಕಾರಣದಿಂದ ಮದುವೆಯನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಿ ಕೊಂಡಿದ್ದರು ..ಅದರಂತೆಯೇ ಡಿಸೆಂಬರ್ ನಲ್ಲಿ ಅರಮನೆ ಮೈದಾನದಲ್ಲಿ ಕಾವ್ಯಾ ಗೌಡ ಅವರ ಮದುವೆ ಅದ್ದೂರಿಯಾಗಿ ನಡೆಯಲಿದೆ …ಸದ್ಯ ಕಾವ್ಯಾಗೌಡ ಬ್ಯಾಚುಲರ್ ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ….