ಕನ್ನಡದ ಹೆಮ್ಮೆ, ಭಾರತದ ಅತಿನಿರೀಕ್ಷಿತ ಚಿತ್ರ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಈ ಸಿನಿಮಾದ ಬಗೆಗಿನ ಸಂಪೂರ್ಣ ಮಾಹಿತಿ ಬಹುಪಾಲು ಎಲ್ಲ ಕಲಾರಸಿಕರಲ್ಲೂ ಇರುವಂತದ್ದೇ. ಸದ್ಯ ಚಿತ್ರತಂಡ ಹೇಳಿದಂತೆ ನಾಳೆ(ಮಾರ್ಚ್ 27) ಸಿನಿಮಾದ ಬಹುಬೇಡಿಕೆಯ ಟ್ರೈಲರ್ ಬಿಡುಗಡೆಯಾಗಲಿದ್ದು, ಈ ಸಂಧರ್ಭಕ್ಕಾಗಿ ವಿಜೃಂಭಣೆಯ ಕಾರ್ಯಕ್ರಮ ಒಂದನ್ನು ಚಿತ್ರತಂಡ ಆಯೋಜಿಸಿದೆ.
ಮಾರ್ಚ್ 27ರಂದು ಬೆಂಗಳೂರಿನಲ್ಲೇ ನಡೆಯಲಿರೋ ಈ ಕಾರ್ಯಕ್ರಮವನ್ನ ಬಾಲಿವುಡ್ ನ ಹೆಸರಾಂತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹಾರ್ ನಡೆಸಿ ಕೊಡಲಿದ್ದಾರಂತೆ(host). ಕರಣ್ ಜೋಹಾರ್ ನಡೆಸಿಕೊಡೋ ಟಿವಿ ಕಾರ್ಯಕ್ರಮಗಳೆಲ್ಲ ಸೂಪರ್ ಹಿಟ್ ಆಗಿದ್ದು ಅಭಿಮಾನಿಗಳಲ್ಲಿನ ಆಕಾಂಕ್ಷೆಯನ್ನ ಈ ವಿಷಯ ಹೆಚ್ಚು ಮಾಡುತ್ತಿದೆ. ಇದಷ್ಟೇ ಅಲ್ಲದೇ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಿವಣ್ಣನ ಆಗಮನ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವುದಂತೆ ಮಾಡುವುದಂತು ಖಂಡಿತ.
ಬಿಡುಗಡೆಗೆ ಇನ್ನೆರಡು ವಾರಗಳಷ್ಟೇ ಬಾಕಿ ಇರುವಾಗ ಚಿತ್ರತಂಡ ತನ್ನ ಪ್ರಚಾರ ಕಾರ್ಯಕ್ರಮಗಳನ್ನ ಗಾಳಿಯ ವೇಗದಲ್ಲಿ ನಡೆಸುತ್ತಿದೆ ಎಂದರೆ ತಪ್ಪಾಗದು. 2018ರಲ್ಲಿ ಬಿಡುಗಡೆಯದ ಇದರ ಮೊದಲ ಭಾಗ ಮಾಡಿದಂತ ಎಲ್ಲ ದಾಖಲೆಗಳನ್ನ ಈ ಎರಡನೇ ಭಾಗ ಅನಾಯಾಸವಾಗಿ ಮುರಿದು ಹಾಕೋ ಎಲ್ಲ ಸಾಧ್ಯತೆಗಳಿವೆ. ಸದ್ಯ ಚಿತ್ರದ ಟ್ರೈಲರ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.