ನಟ ಕಿಚ್ಚ ಸುದೀಪ್ ಸಿನಿಮಾದಲ್ಲಿ ಅಭಿನಯ ಮಾಡೋದ್ರ ಜೊತೆಗೆ ಕ್ರೀಡೆಯಲ್ಲಿಯೂ ಸಾಕಷ್ಟು ಆಸಕ್ತಿ ಹೊಂದಿದ್ದಾರೆ… ಆಕ್ಟರ್ ಆಗಿಲ್ಲ ಅಂದಿದ್ರೆ ಕ್ರಿಕೆಟರ್ ಆಗ್ತಿದ್ದೆ ಅನ್ನೋದು ಕಿಚ್ಚನ ಮನದಾಳದ ಮಾತು..ಸದ್ಯ ಈಗ ಕಿಚ್ಚ ಕಬ್ಬಡಿಯಲ್ಲಿ ಬ್ಯುಸಿ ಆಗಿದ್ದಾರೆ ..ಸುದೀಪ್ ಕಬ್ಬಡಿ ಆಡ್ತಿದ್ದಾರಾ…ಇಲ್ಲ ಕಬ್ಬಡಿ ಪ್ರಮೋಷನ್ ಮಾಡ್ತಿದ್ದಾರೆ…
ಸುದೀಪ್ ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ತಂಡವನ್ನ ಬೆಂಬಲಿಸಿ ಪ್ರೋಮೋದಲ್ಲಿ ನಟಿಸಿ ಘರ್ಜಿಸಿದ್ದಾರೆ. ಈಬಾರಿಯ ಪ್ರೋ ಕಬ್ಬಡಿಯ ಬೆಂಗಳೂರು ತಂಡಕ್ಕೆ ಕಿಚ್ಚ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ …ಅದಕ್ಕೆ ಸಂಬಂದಿಸಿದ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚ ಪ್ರೋಮೋದಲ್ಲಿ ಖಡಕ್ ಆಗಿ ಕಾಣಿಸ್ತಿದ್ದಾರೆ….
ಇನ್ನು ಕೆಲವೇ ದಿನಗಳಲ್ಲಿ ಪ್ರೋ ಕಬಡ್ಡಿ ಲೀಗ್ ಟೂರ್ನಿ ಆರಂಭವಾಗಲಿದೆ…ಅದಕ್ಕಾಗಿ ಬೆಂಗಳೂರು ಬುಲ್ಸ್ ಸಖತ್ತಾಗಿ ಸಿದ್ಧವಾಗುತ್ತಿದೆ. ಸೂಪರ್ ಸ್ಟಾರ್ ರೇಡರ್ ಪವನ್ ಕುಮಾರ್ ಶೆಹ್ರಾವತ್ ಅವರ ಜೊತೆ ಇನ್ನೂ ಕೆಲ ಪ್ರಮುಖ ರೇಡರ್ಗಳನ್ನ ಬುಲ್ಸ್ ತಂಡ ಹರಾಜಿನಲ್ಲಿ ಕೊಂಡು ತಂದಿದೆ. ಈಗ ಫುಲ್ ಚಾರ್ಜ್ ಆಗಿರುವ ಬೆಂಗಳೂರು ಬುಲ್ಸ್ನ ಫ್ಯಾನ್ಸ್ಗೆ ಕಿಚ್ಚ ಸುದೀಪ್ ಮತ್ತಷ್ಟು ಎನರ್ಜಿ ಕೊಟ್ಟಿದ್ದಾರೆ…