ಕಬ್ಜ…ಸ್ಯಾಂಡಲ್‌ವುಟ್ ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ..ನಟ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮತ್ತೆ ಒಟ್ಟಿಗೆ ಅಭಿನಯ ಮಾಡುತ್ತಿದ್ದು ಚಿತ್ರಕ್ಕೆ ಆರ್ ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ ..
ಈಗಾಗಲೆ ಚಿತ್ರದ ಪೋಸ್ಟರ್ ಹಾಗೂ ಮೇಕಿಂಗ್ ನಿಂದಲೇ ಸದ್ದು ಮಾಡುತ್ತಿರುವ ಕಬ್ಜ ಸಿನಿಮಾದಲ್ಲಿ ಕಿಚ್ಚ ಸುದೀಪ್ ಭಾರ್ಗವ ಬಕ್ಷಿ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ …
ಈ ಹಿಂದೆ ಉಪ್ಪಿ ಕ್ಯಾರೆಕ್ಟರ್ ಲುಕ್ ರಿವಿಲ್ ಮಾಡಿದ್ದ ತಂಡ ಕಿಚ್ಚ ಸುದೀಪ್ ಕೂಡ ಇದೆ ರೀತಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಹಿಂಟ್ ನೀಡಿದ್ರು…ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಕಬ್ಜ ತಂಡ ಸೇರಿಕೊಂಡಿದ್ದು ಚಿತ್ರದಲ್ಲಿ ತಾವು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಲುಕ್ ರಿವಿಲ್ ಮಾಡಿದ್ದಾರೆ….
ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ತಮ್ಮ ಲುಕ್ ರಿವಿಲ್ ಮಾಡಿದ್ದು ಅಭಿಮಾನಿಗಳಿಂದ ಕಿಚ್ಚನ ಹೊಸ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗಿದೆ…ಕೆಂಪೇಗೌಡ ಸಿನಿಮಾದಲ್ಲಿ ಕಿಚ್ಚ ಇದೇ ಲುಕ್ ನಲ್ಲಿ ಮಿಂಚಿದ್ರು…ಅದಾದ ನಂತ್ರ ಈಗ ಮತ್ತೆ ಓಲ್ಡ್ ಲುಕ್ ಗೆ ಕಂ ಬ್ಯಾಕ್ ಮಾಡಿದ್ದಾರೆ…