ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿನಯಿಸಿ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟ.
ನಮ್ಮ ಕಿಚ್ಚನಿಗೆ ತೆಲುಗಿನ ಸಾಹೋ ಖ್ಯಾತಿಯ ನಿರ್ದೆಶಕ ಸುಜಿತ್ ಅವರು ಕಥೆ ಹೇಳಿದ್ದಾರೆ. ಇವರು ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ.
ಮಾನಡು ಸಿನಿಮಾ ಖ್ಯಾತಿಯ ನಿರ್ದೇಶಕ ವೆಂಕಟ್ ಪ್ರಭು ಅವರೂ ಕೂಡ ಕಿಚ್ಚ ಸುದೀಪ್ ಅವರಿಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಕಿಚ್ಚ ನ ನಿರ್ಧಾರ ಏನು ಎಂದು ಕಾದು ನೋಡಬೇಕಾಗಿದೆ.