20.9 C
Bengaluru
August 13, 2026
Karnataka Bhagya
Blogಇತರೆ

ವಿಭಿನ್ನವಾದ ನಿರ್ಧಾರ ಮಾಡಿದ ನಟಿ ಸುಶ್ಮಿತಾ ಗೌಡ

ಲವ್ ಮಾಕ್ಟೇಲ್ 2 ನಟಿ ಸುಶ್ಮಿತಾ ಗೌಡ
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ ಹೌದು. ಇದೀಗ ಅವರು ಪ್ರೀತಿಯಿಂದ ಬೆಳೆಸಿದ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ನೂರಾರು ಜನರಿಗೆ ಮಾದರಿ ಆಗಿದ್ದಾರೆ. ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ನಟಿ, ಹೆಣ್ಣಿಗೆ ಕೂದಲು ಎಷ್ಟು ಮುಖ್ಯವಾಗುತ್ತದೆ ಮತ್ತು ಇಷ್ಟು ಉದ್ದವಾದ ಕೂದಲು ಬೆಳೆಸಲು ಎಷ್ಟು ಸಮಯ ಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

‘ನನ್ನ ಜೀವನದಲ್ಲಿ ನನಗೆ ಅತಿ ಹೆಚ್ಚು ಅಮೂಲ್ಯವಾದದ್ದು ನನ್ನ ಕೂದಲು. ಅದು ಬೆಳೆಯುತ್ತ ನನ್ನನ್ನೂ ಬೆಳೆಸಿದೆ. ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವ ನಂಬಿಕೆಯನ್ನು ಕೊಟ್ಟಿದೆ. ಸುಂದರವಾದ ಉದ್ದ ಕೂದಲಿರಬೇಕು ಅನ್ನೋದು ನನ್ನ ಕನಸು. ನೀವೆಲ್ಲಾ ನೋಡುತ್ತಿರುವ ಕೂದಲನ್ನು ಬೆಳೆಸುವುದಕ್ಕೆ ನಾನು 6 ವರ್ಷ ತೆಗೆದುಕೊಂಡಿರುವೆ. ರಾತ್ರೋರಾತ್ರಿ ಏನೂ ಅಗುವುದಿಲ್ಲ, ಹಾಗೆ ನನ್ನ ಕೂದಲು ಬೆಳೆಸಲು ಕೂಡ ಹೆಚ್ಚಿನ ಸಮಯ ಮತ್ತು ಶ್ರದ್ಧೆ ಬೇಕಿತ್ತು. ನನ್ನ ಜೀವನದಲ್ಲಿ ದೊಡ್ಡ ತಿರುವುಗಳು ಸಿಕ್ಕಿರುವುದೇ ನನ್ನ ಕೂದಲಿನಿಂದ. ಇಂದು ಅನೇಕ ವಿಚಾರಗಳಿಗೆ ನಾನು ಗ್ರೇಟ್‌ಫುಲ್. ಈ ಗ್ರ್ಯಾಟಿಟ್ಯೂಡ್‌ಗೆ ನಾನು ನನ್ನ ಕೂದಲನ್ನು ದಾನ ಮಾಡಿರುವೆ. ನಮ್ಮ ಸುತ್ತಲಿರುವ ರಿಯಲ್ ಫೈಟರ್‌ಗಳಿಗೆ ಸಹಾಯ ಮಾಡಲು ಎಂದೂ ಎರಡು ಬಾರಿ ಯೋಚಿಸಬೇಡಿ. ಕೆಲವೊಮ್ಮೆ ಈ ರೀತಿಯ ಸಣ್ಣ ಪುಟ್ಟ ವಿಚಾರಗಳು ನಮ್ಮ ಮನಸ್ಸಿನಲ್ಲಿ ದೊಡ್ಡ ಜಾಗ ತೆಗೆದುಕೊಳ್ಳುತ್ತದೆ’ ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

ಐಟಿ ಕೆಲಸ ಬಿಟ್ಟು ಜೀವನಕ್ಕೆ ದಾರಿ ಹುಡುಕುವಾಗ ಸುಶ್ಮಿಕಾ ಆಯ್ಕೆ ಮಾಡಿಕೊಂಡಿದ್ದು ಕೂದಲು. ಹೌದು! ಚಿಕ್ಕ ವಯಸ್ಸಿನಿಂದಲ್ಲೂ ಅಜ್ಜಿ ಸಲಹೆ ಮಾಡಿದ ರೀತಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುತ್ತಿದ್ದ ಸುಶ್ಮಿತಾ ಅದೇ ಪದಾರ್ಥಗಳನ್ನು ಬಳಸಿಕೊಂಡು ಕೂದಲು ಎಣ್ಣೆ ತಯಾರಿಸಿ ಒಂದು ಕೂದಲು ಎಣ್ಣೆಯ ಬ್ರ್ಯಾಂಡ್‌ ಕೂಡ ಓಪನ್ ಮಾಡಿದ್ದಾರೆ. ಲಕ್ಷಾಂತರ ಜನರು ಈ ಎಣ್ಣೆಯನ್ನು ಬಳಸಿ ದೊಡ್ಡ ಬದಲಾವಣೆ ಕಂಡಿದ್ದಾರೆ. ಇದಾದ ನಂತರ ಸುಶ್ಮಿತಾ ಸ್ಕಿನ್‌ ಕೇರ್‌ ಪ್ರಾಡೆಕ್ಟ್‌ ಮತ್ತು ಮೂಗುತ್ತಿ ಬ್ಯುಸಿನೆಸ್‌ ಆರಂಭಿಸಿದ್ದರು.

ಅಂದ ಹಾಗೆ ಈ ನಟಿ ಲವ್‌ ಮಾಕ್ಟೇಲ್‌ ಸಿನಿಮಾದಲ್ಲಿ ಬ್ರೋಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಗುತ್ತಿ ಮತ್ತು ಕೂದಲಿಂದ ಎದ್ದು ಕಾಣುವ ಅವರ ಚೆಲುವನ್ನು ಸಿನಿಮಾ ನೋಡಿದ ಅನೇಕರು ಅವರಿಗೆ ಮೆಸೇಜ್ ಮಾಡಿ ತಿಳಿಸಿದ್ದರು.
ಇನ್ನು ತಮ್ಮ ಕಥೆಯನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ ಹೇಳಿದ ಅವರು ”ನಾನು ಇಲ್ಲಿ ತನಕ ಬರುವುದಕ್ಕೆ ಕಾರಣವೇ ಸೋಷಿಯಲ್ ಮೀಡಿಯಾ. ಇದನ್ನು ಒಂದು ಅವಕಾಶವಾಗಿ ನೋಡಿದ್ದೇನೆ. ನಾನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನ್ನನ್ನು ಟರ್ಮಿನೇಟ್ ಮಾಡಿದರು. ಆಗ ಏನು ಮಾಡಬೇಕೆಂಬುವುದೇ ಗೊತ್ತಿರಲಿಲ್ಲ. ಆದರೆ ತುಂಬಾ ಜನರು ನನ್ನನ್ನು ಫಾಲೋ ಮಾಡುತ್ತಿದ್ದರು. ಅದು ನನ್ನ ಕೂದಲಿಗೋಸ್ಕರ. ತುಂಬಾ ಜನರು ಕೇಳುತ್ತಿದ್ದರು, ನನ್ನ ಹೇರ್‌ಕೇರ್‌ ಏನು ಅಂತ. ಈ ಬ್ಯುಸಿ ಜೀವನದಲ್ಲಿ ಎಲ್ಲರಿಗೂ ಕೇರ್ ಮಾಡುವುದಕ್ಕೆ ಕಷ್ಟ ಆಗುತ್ತದೆ. ಅದಕ್ಕೆ ನಾನೇ ಯಾಕೆ ಒಂದು ಹೇರ್‌ಕೇರ್‌ ಬ್ರ್ಯಾಂಡ್ ಶುರು ಮಾಡಬಾರದು, ಎಂದುಕೊಂಡು ಶುರು ಮಾಡಿದೆ. ಇದು ನಮ್ಮ ಹಿರಿಯರು ಬಳಸುತ್ತಿದ್ದ ರೆಸಿಪಿ, ನನ್ನ ತಾಯಿ ಮನೆಯಲ್ಲಿಯೇ ಮಾಡಿ ನನಗೆ ಹಾಕುತ್ತಿದ್ದರು. ಇದು ಬಿಟ್ಟು ಬೇರೆ ಯಾವುದನ್ನೂ ನಾನು ಕೂದಲ ಪೋಷಣೆಗೆ ಬಳಸುತ್ತಿರಲಿಲ್ಲ. ನಾನು ಮತ್ತು ನನ್ನ ಬೆಸ್ಟ್‌ ಫ್ರೆಂಡ್ ಸೇರಿಕೊಂಡು ಈ ಬ್ರ್ಯಾಂಡ್‌ ನೋಡಿಕೊಳ್ಳುತ್ತಿದ್ದೇವೆ” ಎಂದರು.

Related posts

ಜಗವೇ ನೀನು ಎಂದು ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ಸಿದ್ ಶ್ರೀರಾಮ್

Nikita Agrawal

ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್.

Nikita Agrawal

2ವರ್ಷದ ನಂತರ ಪ್ರೇಕ್ಷಕರ ಎದುರು ಬರಲಿದ್ದಾರೆ ವಿಜಯ್ ದೇವರಕೊಂಡ

Nikita Agrawal

Leave a Comment

Share via
Copy link
Powered by Social Snap