ಕನ್ನಡ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಲವ್ ಮಾಕ್ಟೈಲ್ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ರಚನಾ ಈಗ ಚಂದನವನದಲ್ಲಿ ಹಲವು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಸಹಿ ಮಾಡಿರುವ ರಚನಾ ಇಂದರ್ ಹೊಸ ನಟ ಅಜಯ್ ಪೃಥ್ವಿ ಜೊತೆ ನಟಿಸುತ್ತಿದ್ದು ಅಂಬರೀಷ್ ನಿರ್ದೇಶನ ಮಾಡುತ್ತಿದ್ದಾರೆ.
“ನಾನು ಹಲವು ರೊಮ್ಯಾಂಟಿಕ್ ಚಿತ್ರಗಳನ್ನು ಮಾಡಿದ್ದೇನೆ. ಇದು ಔಟ್ ಆಂಡ್ ಔಟ್ ಕಾಮಿಡಿ ಪಾತ್ರವಾಗಿದ್ದು ವೃತ್ತಿ ಬದುಕಿಗೆ ಹೊಸ ಪ್ರವೇಶ ಮಾಡಿರುವ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ಸಂತೋಷದಿಂದ ಇರುವ ಹುಡುಗಿ ಪಾತ್ರ ಇದು ನನಗೆ ಹೊಸದಾಗಿದೆ.
ನನ್ನ ಪಾತ್ರ ನಿಮಗೆ ನಗು ತರಿಸುತ್ತದೆ ಎಂಬ ಭರವಸೆ ನೀಡಬಲ್ಲೆ”ಎಂದಿದ್ದಾರೆ.
ರಚನಾ ತಮ್ಮ ಕೆರಿಯರ್ ನ ಗ್ರಾಫ್ ಕುರಿತು ಸಂತೋಷಗೊಂಡಿದ್ದಾರೆ. “ನನ್ನ ಕೆರಿಯರ್ ಆರಂಭಕ್ಕೆ ಇದಕ್ಕಿಂತ ಉತ್ತಮವಾದುದನ್ನು ನಾನು ಕೇಳಿಲ್ಲ. ನನಗೆ ಸಿಗುತ್ತಿರುವ ಪಾತ್ರಗಳಿಗೆ ಜೀವ ತುಂಬಲು ಇಷ್ಟ ಪಡುತ್ತೇನೆ. ಸಿನಿಮಾಗಳ ಸಬ್ಜೆಕ್ಟ್ ವಿಶ್ವವ್ಯಾಪಿ ಆಗಿದೆ. ಪ್ರತಿಯೊಂದು ಸಬ್ಜೆಕ್ಟ್ ಭಿನ್ನವಾಗಿದೆ. ತ್ರಿಬಲ್ ರೈಡಿಂಗ್ , ಹರಿಕಥೆ ಅಲ್ಲ ಗಿರಿಕಥೆ, ಲವ್ 360 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.