Karnataka Bhagya
Blogಕ್ರೀಡೆ

ಒಟಿಟಿಗೆ ಬಂತು ಲವ್ ಮೊಕ್ಟೇಲ್ 2

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಲವ್ ಮೊಕ್ಟೇಲ್ 2’ ಚಿತ್ರಮಂದಿರಗಳಲ್ಲಿ ಜನರ ಮನಗಳನ್ನು ಕದಿಯುವಲ್ಲಿ ಯಶಸ್ವಿಯಾಗಿತ್ತು. ಫೆಬ್ರವರಿ 11ರಂದು ಬಿಡುಗಡೆಯಾದ ಈ ಚಿತ್ರ ಈಗಲೂ ಕೂಡ ಚಿತ್ರಮಂದಿರಗಳಲ್ಲಿ ಲಭ್ಯವಿದೆ. ಬೆಳ್ಳಿತೆರೆ ಮೇಲೆ ಆದಿ-ನಿಧಿ ಜೋಡಿಯ ಪ್ರೇಮಕಥೆಯ ಮುಂದುವರೆದ ಭಾಗವನ್ನು ನೋಡಲು ಜನ ಚಿತ್ರಮಂದಿರಗಳಲ್ಲಿ ತುಂಬಿತುಳುಕಿದ್ದರು. ಮೊದಲ ಭಾಗವಾದ ‘ಲವ್ ಮೊಕ್ಟೇಲ್’ ನೋಡಿ ಮುಂದಿನ ಅಧ್ಯಾಯಕ್ಕೆಂದು ಚಿತ್ರಮಂದಿರಕ್ಕೇ ಬಂದ ಪ್ರತಿಯೊಬ್ಬ ಪ್ರೇಕ್ಷಕನ ಮನಸೆಳೆಯುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು. ಈಗ ಈ ಸಿನಿಮಾವನ್ನ ಮನೆಯಲ್ಲೇ ಕೂತು ನೋಡಬಹುದಾಗಿದೆ.

ಹೌದು, ‘ಲವ್ ಮೊಕ್ಟೇಲ್ 2’ ಒಟಿಟಿಗೆ ಬಂದಿದೆ. ಮಾರ್ಚ್ 15ರ ನಡುರಾತ್ರಿ 12ಗಂಟೆಯಿಂದಲೇ ಅಮೆಜಾನ್ ಪ್ರೈಮ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ ಸುಮಾರು ಒಂದು ತಿಂಗಳ ನಂತರ ಚಿತ್ರ ಚಿತ್ರಮಂದಿರಗಳ ಜೊತೆಯೇ ಪ್ರೈಮ್ ವಿಡಿಯೋದಲ್ಲಿ ಕೂಡ ಸಿಗಲಿದೆ. ಬಹುಪಾಲು ಕನ್ನಡಿಗರು ಚಿತ್ರಮಂದಿರಕ್ಕೇ ಹೋಗಿ ಸಿನಿಮಾವನ್ನ ಕಣ್ತುಂಬಿಕೊಂಡಿದರೂ, ಹೋಗಲಾಗದೆ ಇದ್ದ ಪ್ರೇಕ್ಷಕರು ಈಗ ಮನೆಯಲ್ಲೇ ಕೂತು ಆದಿ ಜೀವನದ ಮುಂದಿನ ಅಧ್ಯಾಯವನ್ನ ಅನುಭವಿಸಬಹುದಾಗಿದೆ. ಕಥೆಯನ್ನ ಹುಟ್ಟುಹಾಕಿ ನಿರ್ದೇಶನ ಮಾಡಿದ ಡಾರ್ಲಿಂಗ್ ಕೃಷ್ಣಾಗೆ ಅವರ ಪತ್ನಿಯಾದಂತ ಮಿಲನ ನಾಗರಾಜ್ ನಿರ್ಮಾಣದಲ್ಲಿ ಸಹಾಯ ಮಾಡಿದ್ದರು. ಸದ್ಯ ಬಾಕ್ಸ್ ಆಫೀಸ್ ನಲ್ಲಿ ಅತ್ತ್ಯುತ್ತಮ ಓಟವನ್ನ ಚಿತ್ರ ಕಾಣುತ್ತಿದೆ.

ನಾಯಕ ಆದಿಯ ಪಾತ್ರದಲ್ಲಿ ಕೃಷ್ಣ ಹಾಗು ನಾಯಕಿ ನಿಧಿಯಾಗಿ ಮಿಲನ ಎಲ್ಲರ ಮನದಲ್ಲಿ ಅಚ್ಚೋತ್ತಿದಂಗೆ ಉಳಿದುಹೋಗಿದ್ದಾರೆ. ಇನ್ನು ಜೋ ಆಗಿ ಅಮೃತ ಐಯೆಂಗಾರ್ ಆದಿಯ ಸ್ನೇಹಿತರಾದ ವಿಜು ಹಾಗು ಸುಷ್ಮಾ ಜೋಡಿಯಾಗಿ ಅಭಿಲಾಷ್ ಮತ್ತು ಖುಷಿ ಆಚಾರ್ ಬಣ್ಣ ಹಚ್ಚಿದ್ದಾರೆ. ಈ ಭಾಗದ ಹೊಸ ಪಾತ್ರ ‘ಸಿಹಿ’ಗೆ ಮಲಯಾಳಿ ಬೆಡಗಿ ರಚೆಲ್ ಡೇವಿಡ್ ನ್ಯಾಯ ಒದಗಿಸಿದ್ದಾರೆ. ನಕುಲ್ ಅಭಯಂಕರ್ ಅವರ ಮುದನೀಡೋ ಸಂಗೀತ ಇರೋ ಈ ಚಿತ್ರವನ್ನ ‘ಶ್ರೀ ಕ್ರೇಜಿ ಮೈಂಡ್ಸ್’ ಛಾಯಗ್ರಹಣ ಹಾಗು ಎಡಿಟಿಂಗ್ ಮಾಡಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಚಿತ್ರ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕೂಡ ಲಭ್ಯವಾಗುತ್ತಿದೆ.

Related posts

ಸೆಟ್ಟೇರಿದ ಶಿವಾಜಿ ಸುರತ್ಕಲ್ 2 ಸಿನಿಮಾ

Karnatakabhagya

ಈ‌ವರ್ಷದ ಹುಟ್ಟುಹಬ್ಬ ದರ್ಶನ್ ಗೆ ಸಖತ್ ಸ್ಪೆಷಲ್ ಕಾರಣ ಇಲ್ಲಿದೆ

Nikita Agrawal

‘ಕೆ ಜಿ ಎಫ್’ ನಿಂದ ಬರಲಿದೆ ತೂಫಾನ್!!

Nikita Agrawal

Leave a Comment

Share via
Copy link
Powered by Social Snap