ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ ಮದಗಜ ಟ್ರೇಲರ್ …
ಮದಗಜ ಸಿನಿಮಾದ ಟ್ರೇಲರ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಲವಾರು ರಾಜಕೀಯ ಗಣ್ಯರು ಭಾಗಿಯಾಗಿದರು…
ಮದಗಜ ಸಿನಿಮಾಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.. ಆಶಿಕಾ ರಂಗನಾಥ್ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ …ಇನ್ನೂ ಖಡಕ್ ವಿಲನ್ ಪಾತ್ರದಲ್ಲಿ ಜಗಪತಿ ಬಾಬು ಅಭಿನಯ ಮಾಡಿರೋದು ವಿಶೇಷ….ಮದಗಜ ಸಿನಿಮಾದಲ್ಲಿ ಅದ್ದೂರಿ ತಾರಾಬಳಗವಿದ್ದು ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ಸಖತ್ ಇಂಪ್ರೆಸಿವ್ ಆಗಿದೆ ಚಿತ್ರದ ಮೇಕಿಂಗ್ ಕ್ಯಾಮೆರಾ ವರ್ಕ್ ಡೈರೆಕ್ಷನ್ ಮ್ಯೂಸಿಕ್ ಎಲ್ಲವೂ ಕೂಡ ಪ್ರಾಮಿಸ್ಸಿಂಗ್ ಆಗಿದೆ..
ಇನ್ನೂ ಇದೆ ಡಿಸೆಂಬರ್ 3 ರಂದು ಮದಗಜ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು ಕನ್ನಡ ಹಾಗೂ ತೆಲುಗು 2ಭಾಷೆಯಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ