ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಮುಂದಿನ ಸಿನಿಮಾ ಮಾಫಿಯಾ…ಹೌದು ಟೈಟಲ್ ಮತ್ತು ಪೋಸ್ಟರ್ ನಿಂದಲೇ ಕುತೂಹಲ ಮೂಡಿಸಿರುವಂತಹ ಮಾಫಿಯ ಸಿನಿಮಾದಲ್ಲಿ ಪ್ರಜ್ವಲ್ ಅಭಿನಯ ಮಾಡುತ್ತಿರುವ ಪಾತ್ರವನ್ನ ಚಿತ್ರತಂಡ ರಿವೀಲ್ ಮಾಡಿದೆ …
ನಿರ್ದೇಶಕ ಗುರುದತ್ ಗಾಣಿಗ ಕೈನಿಂದ ಡೈರೆಕ್ಟರ್ ಲೋಹಿತ್ ಕೈಗೆ ಬಂದಿರುವ ಮಾಫಿಯಾ ಸಿನಿಮಾ ಈಗ ಮತ್ತಷ್ಟು ಕುತೂಹಲ ಮೂಡಿಸುತ್ತಿದೆ…ಲೋಹಿತ್ ನಿರ್ದೇಶನದ “ಮಾಫಿಯಾ” ಚಿತ್ರದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಡಿ.ಸತ್ಯನಾರಾಯಣ ಹೆಸರಿನ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…
ಚಿತ್ರರಂಗದಲ್ಲಿ ಖಡಕ್ ಪೊಲೀಸ್ ಆಫೀಸರ್ ಅಂತ ಅಂದಾಗ ಮೊದಲು ನೆನಪಿಗೆ ಬರುವುದು ದೇವರಾಜ್ ಈಗ ಪ್ರಜ್ವಲ್ ತಮ್ಮ ಅಪ್ಪನ ಹಾದಿಯಲ್ಲೇ ನಡೆಯುತ್ತಿದ್ದಾರೆ…ಮಾಫಿಯಾ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು ಲೋಹಿತ್ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರವನ್ನ ಬೆಂಗಳೂರು ಫಿಲಂಸ್ ಕುಮಾರ್ ನಿರ್ಮಿಸುತ್ತಿದ್ದಾರೆ…