ಬಾಲಿವುಡ್ ಎವರ್ ಗ್ರೀನ್ ಬ್ಯೂಟಿ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ
… ನಿನ್ನೆಯಷ್ಟೇ ಮಲೈಕಾ ಹಾಗೂ ಅರ್ಜುನ್ ಕಪೂರ್ ವ್ಯಾಲೆಂಟೇನ್ಸ್ ಡೇನ ಸೂಪರ್ ಸ್ಪೆಷಲ್ ಆಚರಣೆ ಮಾಡಿದ್ದಾರೆ …
ಕೆಲವು ದಿನಗಳ ಹಿಂದೆಯಷ್ಟೇ ಅರ್ಜುನ್ ಕಪೂರ್ ಮಲೈಕಾ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರಗಳು ಗಾಸಿಪ್ ಆಗಿ ಹರಡಿತ್ತು… ಆದರೆ ಅದಾದ ನಂತರ ಮತ್ತೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು… ಈಗ ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಿರುವ ಈ ಜೋಡಿ ಫೋಟೋಗಳನ್ನ ಶೇರ್ ಮಾಡುವ ಮೂಲಕ ಇಬ್ಬರೂ ಪರಸ್ಪರ ಎಷ್ಟು ಪ್ರೀತಿ ಮಾಡುತ್ತೇವೆ ಎಂಬುದನ್ನು ಹಂಚಿಕೊಂಡಿದ್ದಾರೆ ..
ಮಲೈಕಾ , ಅರ್ಜುನ್ ಕಪೂರ್ ರನ್ನ ಬಿಗಿದಪ್ಪಿಕೊಂಡು ಇರುವ ಫೋಟೋವನ್ನು ಶೇರ್ ಮಾಡಿ ಅರ್ಜುನ್ ಎಂದೆಂದಿಗೂ ನನ್ನವನು ಎಂದು ಸ್ಟೇಟ್ ಮೆಂಟ್ ಮಾಡಿದ್ದಾರೆ… ಇನ್ನು ಅರ್ಜುನ್ ಕಪೂರ್.. ಮಲೈಕಾ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡು ನಾಲ್ಕೈದು ಸಾಲು ಕವನವನ್ನು ಬರೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ …ಒಟ್ಟಾರೆ ಯಾವುದೇ ವಯಸ್ಸಿನ ಅಂತರವಿದ್ದರೂ ಪ್ರೀತಿ ಪ್ರೇಮಕ್ಕೇನು ಕಮ್ಮಿಯಿಲ್ಲ ಎಂದು ಈ ಜೋಡಿ ವ್ಯಾಲೆಂಟೈನ್ಸ್ ಡೇಯನ್ನು ಸ್ಪೆಷಲ್ ಆಗಿ ಆಚರಣೆ ಮಾಡಿದೆ …