Karnataka Bhagya
Blogರಾಜಕೀಯ

ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್

ಕಿರುತೆರೆ ವೀಕ್ಷಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಅದೇನಂತೀರಾ? ನಟನೆಯ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿದ್ದ ಚೆಂದುಳ್ಳಿ ಚೆಲುವೆ ಮೇಘನಾ ರಾಜ್ ಇದೀಗ ಕಿರುತೆರೆಯಲ್ಲಿಯೂ ಮಿಂಚಲಿದ್ದಾರೆ. ಆ ಮೂಲಕ ಪ್ರತಿ ವಾರಾಂತ್ಯ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರ ನಟಿ ಮೇಘನಾ ರಾಜ್. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ ಡ್ಯಾನ್ಸಿಂಗ್ ಚಾಂಪಿಯನ್ ನ ಪರ್ಮನೆಂಟ್ ತೀರ್ಪುಗಾರರಾಗಿ ಮೇಘನಾ ರಾಜ್ ಮುಂದುವರಿಯಲಿದ್ದಾರೆ.

ಡ್ಯಾನ್ಸಿಂಗ್ ಚಾಂಪಿಯನ್ ನ ಆರಂಭದ ಸಂಚಿಕೆಯಲ್ಲಿ ಅತಿಥಿ ತೀರ್ಪುಗಾರರಾಗಿ ಮೇಘನಾ ರಾಜ್ ಅವರು ಕಾಣಿಸಿಕೊಂಡಿದ್ದರು. ಆದರೆ ಇದೀಗ ಅವರು ಪರ್ಮನೆಂಟ್ ತೀರ್ಪುಗಾರರಾಗಿ ಬದಲಾಗಿದ್ದು ಇನ್ನು ಮುಂದೆ ಈ ಶೋ ಮುಗಿಯುವ ತನಕ ಮೇಘನಾ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ. .

ಈ ಸಂತಸದ ವಿಚಾರವನ್ನು ಸ್ವತಃ ಮೇಘನಾ ರಾಜ್ ಅವರೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ” ನಿಮ್ಮೆಲ್ಲರ ಹಾರೈಕೆಯಂತೆ, ನೀವು ಬಯಸಿದಂತೆ ನಾನು ಮತ್ತೆ ಕಿರುತೆರೆಗೆ ಮರಳಿದ್ದೇನೆ. ಅತಿಥಿ ತೀರ್ಪುಗಾರ್ತಿಯಾಗಿ ಕಿರುತೆರೆಗೆ ಬಂದಿದ್ದ ನಾನು ಇದೀಗ ಪರ್ಮನೆಂಟ್ ತೀರ್ಪುಗಾತಿಯಾಗಿದ್ದೇನೆ. ಇದು ನಿಜವಾಗಿಯೂ ಅನಿರೀಕ್ಷಿತವಾದುದು‌. ಹೊಸತಾದ ಅನುಭವವೂ ಹೌದು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಮೇಘನಾ ರಾಜ್.

ಇಷ್ಟು ದಿನಗಳ ಕಾಲ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಿದ್ದ ಮೇಘನಾ ರಾಜ್ ಅವರನ್ನು ಇದೀಗ ರಿಯಾಲಿಟಿ ಶೋ ಜಡ್ಜ್ ಆಗಿ ಕಣ್ತುಂಬಿಸಿಕೊಳ್ಳುವ ಸುವರ್ಣಾವಕಾಶ ದೊರಕಿದೆ ಎಂಬ ಖುಷಿ ವೀಕ್ಷಕರಿಗಿದೆ.

Related posts

ರಾಷ್ಟ್ರಪ್ರಶಸ್ತಿ ಪ್ರಕಟ: ಕನ್ನಡದ ಎರಡು ಸಿನಿಮಾಗಳಿಗೆ ಪುರಸ್ಕಾರ.

Nikita Agrawal

ಸುಶಾಂತ್ ಸಿಂಗ್ ರನ್ನು ನೆನಪಿಸಿಕೊಂಡ ಕಿಯಾರಾ

Nikita Agrawal

ಮುಂಬಯಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ರಾಕಿ ಭಾಯ್

Nikita Agrawal

Leave a Comment

Share via
Copy link
Powered by Social Snap