ವಸಿಷ್ಠ ಸಿಂಹ ನಟನೆಯ ಲವ್ ಲಿ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಇತ್ತೀಚೆಗಷ್ಟೇ ಬಹಿರಂಗಗೊಳಿಸಿದ್ದರು. ಚೇತನ್ ಕೇಶವ್ ನಿರ್ದೇಶನದ, ಎಂ ಆರ್ ರವೀಂದ್ರ ನಿರ್ಮಾಣದ ಈ ಲವ್ ಲಿ ಸಿನಿಮಾದಲ್ಲಿ ನಾಯಕಿಯಾಗಿ ಕಿರುತೆರೆಯ ಮುದ್ದು ಮಣಿ ಆಯ್ಕೆಯಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಮಣಿಗಳು ಧಾರಾವಾಹಿಯಲ್ಲಿ ನಾಯಕಿ ದೃಷ್ಟಿ ಆಗಿ ಅಭಿನಯಿಸುತ್ತಿರುವ ಮಲೆನಾಡ ಬೆಡಗಿ ಸಮೀಕ್ಷಾ ಅವರು ಲವ್ ಲಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದು ವಸಿಷ್ಠ ಸಿಂಹ ಅವರೊಂದಿಗೆ ಅಭಿನಯಿಸಲಿದ್ದಾರೆ.
ಇನ್ನು ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನಡೆದಿದೆ.
ಕಿರುತೆರೆಯ ಜೊತೆಗೆ ಹಿರಿತೆರೆಯನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿರುವ ಸಮೀಕ್ಷಾ ಅವರಿಗೆ ಹಿರಿತೆರೆ ಹೊಸದೇನಲ್ಲ. ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ದಿ ಟೆರರಿಸ್ಟ್ ಸಿನಿಮಾದಲ್ಲಿ ರಾಗಿಣಿ ತಂಗಿಯಾಗಿಯಾಗಿ ಬಣ್ಣ ಹಚ್ಚುವ ಮೂಲಕ ಹಿರಿತೆರೆ ಪಯಣ ಶುರು ಮಾಡಿರುವ ಸಮೀಕ್ಷಾ ಮುಂದೆ 96 ಸಿನಿಮಾದಲ್ಲಿ ಜೂನಿಯರ್ ಜಾನು ಆಗಿ ಅಭಿನಯಿಸಿದರು. ದರ್ಶಿತ್ ಭಟ್ ನಿರ್ದೇಶನದ ಫ್ಯಾನ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ನಲ್ಲಿ ಅಭಿನಯಿಸಿದ್ದರು. ಇದೀಗ ಲವ್ ಲಿ ಸಿನಿಮಾದಲ್ಲಿ ಕಾರ್ಪೊರೇಟ್ ಹುಡುಗಿಯಾಗಿ ಮೋಡಿ ಮಾಡಲಿದ್ದಾರೆ.