ಕನ್ನಡ ಕಿರುತೆರೆಯಲ್ಲಿ ಹೊಸದಾಗಿರುವ ಹವಾ ಸೃಷ್ಟಿ ಮಾಡಿರುವ ಧಾರಾವಾಹಿಗಳ ಪೈಕಿ ನಾಗಿಣಿಯೂ ಕೂಡಾ ಒಂದು. ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. ಬರೋಬ್ಬರಿ ಸಾವಿರ ಸಂಚಿಕೆಗಳನ್ನು ಪೂರೈಸಿದ್ದ ನಾಗಿಣಿಯಲ್ಲಿ ದೀಪಿಕಾ ದಾಸ್ ಹಾಗೂ ದೀಕ್ಷಿತ್ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದರು.
ಇದೀಗ ನಾಗಿಣಿ ಧಾರಾವಾಹಿಯ ಸೀಕ್ವೆಲ್ ನಾಗಿಣಿ 2 ಕೂಡಾ ಆರಂಭವಾಗಿದ್ದು ಇದರಲ್ಲಿ ನಮೃತಾ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಿಆರ್ ಪಿಯಲ್ಲಿ ಟಾಪ್ ಸ್ಥಾನದಲ್ಲಿ ಇರುವ ನಾಗಿಣಿ 2 ಧಾರಾವಾಹಿಯ ಬಗ್ಗೆ ಇದೀಗ ಒಂದು ಕುತೂಹಲಕಾರಿ ವಿಷಯ ಹೊರಬಿದ್ದಿದೆ.
ವಿಭಿನ್ನ ಕಥೆಯ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದಿರುವ ನಾಗಿಣಿ ಧಾರಾವಾಹಿ ಕಥೆ ತಿರುವು ಪಡೆದುಕೊಂಡಿದೆ. ಹೌದು, ಇದೀಗ ಧಾರಾವಾಹಿಯ ಸಂಪೂರ್ಣ ಕಥೆ ಬದಲಾಗಿದ್ದು ಹೊಸ ಅಧ್ಯಾಯ ಆರಂಭವಾಗಲಿದೆ. ಇದರಲ್ಲಿ ಶಿವಾನಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಷ್ಟು ದಿನಗಳ ಕಾಲ ನಾಗಿಣಿಯಾಗಿದ್ದ ಶಿವಾನಿ ಇನ್ನು ಮುಂದೆ ಸ್ವಪ್ನ ಸುಂದರಿ ಶೈಲ ಆಗಿ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ. ಈಗಾಗಲೇ ಪೋಸ್ಟರ್ ರಿಲೀಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅಂದ ಹಾಗೇ ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ನಾಟಕದ ಪೋಸ್ಟರ್ ನಂತಿದ್ದು ಮುಂದಿನ ದಿನಗಳಲ್ಲಿ ಧಾರಾವಾಹಿತು ಅದ್ಯಾವ ರೀತಿಯಲ್ಲಿ ಸಾಗಬಹುದು ಎಂದು ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.