Karnataka Bhagya
Blogಕರ್ನಾಟಕ

ಮದುವೆಯಾದ ಮರುದಿನವೇ ಯಡವಟ್ಟು ಮಾಡಿಕೊಂಡ ನಯನತಾರ!!

ತಮಿಳಿನ ‘ಲೇಡಿ ಸೂಪರ್ ಸ್ಟಾರ್’ ನಯನತಾರ ಮದುವೆಯ ಸಡಗರದಲ್ಲಿದ್ದಾರೆ. ಭಾರತದಾದ್ಯಂತ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಯನತಾರ, ತಮಿಳಿನ ಯಶಸ್ವಿ ನಿರ್ದೇಶಕರಾದ ವಿಗ್ನೇಶ್ ಶಿವನ್ ಅವರೊಂದಿಗೆ ಜೂನ್ 9ರಂದು ಸಪ್ತಪದಿ ತುಳಿದಿದ್ದಾರೆ. ಇದೊಂದು ಪ್ರೇಮಕಲ್ಯಾಣವಾಗಿದ್ದು, ಸನಿಹದ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಈ ಮದುವೆ ನೇರವೇರಿದೆ. ಸದ್ಯ ದಂಪತಿ ದೇಗುಲ ದರ್ಶನಕ್ಕೆ ಹೊರಟಿದ್ದು ಈ ವೇಳೆ ನಯನತಾರ ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ವಿಗ್ನೇಶ್ ಶಿವನ್ ಹಾಗು ನಯನತಾರ ದಂಪತಿ ಇತ್ತೀಚಿಗಷ್ಟೇ ತಿರುಪತಿ ದೇವಸ್ಥಾನಕ್ಕೆ ಆಶೀರ್ವಾದಕ್ಕೆಂದು ತೆರಳಿದ್ದರು. ಈ ವೇಳೆ ನಯನತಾರ ತಮ್ಮ ಪಾದರಕ್ಷೆಗಳನ್ನು ಹಾಕಿಕೊಂಡೇ ದೇವಳದ ಒಳಭಾಗವನ್ನು ಪ್ರವೇಶಿಸಿದ್ದಾರೆ. ವಿಷಯ ತಮ್ಮ ಪರಿವೆಗೆ ಬಂದ ತಕ್ಷಣವೇ ತಪ್ಪನ್ನರಿತು ಪಾದರಕ್ಷೆಯನ್ನು ತೆಗೆದಿದ್ದಾರೆ. ಇದನ್ನು ಕಂಡಂತಹ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನರಿತ ದೇವಸ್ಥಾನದ ಆಡಳಿತ ಮಂಡಳಿಯವರು, ನಯನತಾರ ಪಾದರಕ್ಷೆ ಹಾಕಿಕೊಂಡು ಓಡಾಡಿದ ಜಾಗದಲ್ಲೆಲ್ಲ ಭಕ್ತಾಭಿಮಾನಿಗಳು ಚಪ್ಪಲಿ ಹಾಕಿಕೊಂಡು ನಡೆಯಬಹುದು ಎಂದು ವಿಚಾರವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ.

ಆದರೂ ಕೂಡ ನೆಟ್ಟಿಗರು ಈ ಬಗ್ಗೆ ಶಾಂತವಾಗಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ಮಾತುಗಳು ಕಂಡುಬಂದಿದ್ದವು. ಹಾಗಾಗಿ ನಯನತಾರ ಪತಿ ವಿಗ್ನೇಶ್ ಶಿವನ್ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. “ಇದು ಅರಿವಿಲ್ಲದೆ ಆಗಿರುವ ತಪ್ಪು. ದಯಮಾಡಿ ಮನ್ನಿಸಬೇಕು ” ಎಂಬರ್ಥದ ಕ್ಷಮಾಸಾಲುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Related posts

ಚಾರ್ಲಿಗೆ ಮನಸೋತ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು ನೋಡಿ

Nikita Agrawal

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೊಸ ‘ಹೋಪ್’ ಜೊತೆಗೆ ಬರುತ್ತಿದ್ದಾರೆ ಶ್ವೇತ ಶ್ರಿವಾಸ್ತವ.

Nikita Agrawal

‘ಎದ್ದೇಳು ಮಂಜುನಾಥ 2’

Nikita Agrawal

Leave a Comment

Share via
Copy link
Powered by Social Snap