Karnataka Bhagya

ಮಕ್ಕಳ ಮನಸ್ಸಿಗೆ ಕನ್ನಡಿಯಾಗ ಬರುತ್ತಿದೆ ‘ರೂಬಿಕ್ಸ್’.

ಎಡೆಬಿಡದೆ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ ತಮ್ಮದೇ ಒಂದು ಪುಟ್ಟ ಜಗತ್ತನ್ನು ಸೃಷ್ಟಿಸಿ ಬದುಕುವವರು ಮಕ್ಕಳು. ಅವರ ಕುತೂಹಲ, ಅವರ ಚುರುಕುತನ ವಿವರಿಸಲಸಾಧ್ಯ. ಅವರ ಬುದ್ದಿಗೆ ಹೊಳೆವ ಪ್ರಶ್ನೆಗಳೇಷ್ಟೋ, ಅದಕ್ಕೆ ಅವರಿಗೆ ಸಿಗುವ ಉತ್ತರಗಳೆಷ್ಟೋ! ಅದರಲ್ಲೂ ಈಗಿನ ಮಕ್ಕಳಂತು ಸದಾ ಕುತೂಹಲದ ಕೊನೆಯಂಚಿನಲ್ಲಿರುತ್ತಾರೆ. ಇಂತಹ ಮಕ್ಕಳ ಕುತೂಹಲಕಾರಿ ಜಗತ್ತನ್ನು ತೋರಿಸಲು ಬರುತ್ತಿರುವ ಹೊಸ ಸಿನಿಮಾವೇ ‘ರೂಬಿಕ್ಸ್’.

” ‘ರೂಬಿಕ್ಸ್’ ಎಂಬ ಹೆಸರೇ ಒಂದು ಒಗಟನ್ನು ಬಿಂಬಿಸುತ್ತದೆ. ಆದ್ದರಿಂದಲೇ ಚಿತ್ರಕ್ಕೆ ಈ ಹೆಸರಿಟ್ಟಿದ್ದೇವೆ. ಮಕ್ಕಳು ಬುದ್ದಿವಂತರಗಲಿ ಎಂದು ಪೋಷಕರು ಇಚ್ಚಿಸುತ್ತಾರೆ. ಅದೇ ಮಕ್ಕಳು ಅತ್ಯಂತ ಕುತೂಹಲಶಾಹಿಗಳಾದರೆ, ಅವರ ತಲೆಯಲ್ಲಿ ಎಂತೆಂತ ಪ್ರಶ್ನೆಗಳು ಬರಬಹುದು, ಅದನ್ನ ಪೋಷಕರು ಹೇಗೆ ಎದುರಿಸಬೇಕಾಗುತ್ತದೆ ಎಂಬ ಅಂಶಗಳನ್ನ ನಮ್ಮ ಸಿನಿಮಾದಲ್ಲಿ ಹೇಳಲು ಪ್ರಯತ್ನಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕರಾದ ರಂಜಿತ್ ಕುಮಾರ್ ಗೌಡ ಅವರು. ಈ ಹಿಂದೆ ‘ಮದರಂಗಿ’,’ವಾಸ್ಕೊಡಿಗಾಮ’ ಸಿನಿಮಾಗಳ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು ಮಾತ್ರವಲ್ಲದೆ ‘ಆಪಲ್ ಕೇಕ್’ ಎಂಬ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿರುವ ರಂಜಿತ್ ಕುಮಾರ್ ಅವರು ಈ ಸಿನಿಮಾದ ಚುಕ್ಕಾಣಿ ಹಿಡಿದಿದ್ದಾರೆ. ಮಕ್ಕಳ ಪ್ರಪಂಚದ ಬಗೆಗಿನ ಈ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ‘ಜನಸ್ನೇಹಿ ನಿರಾಶ್ರಿತರ ಆಶ್ರಮ’ದ ಮಕ್ಕಳ ಕೈಯಿಂದಲೇ ಬಿಡುಗಡೆ ಮಾಡಿದ್ದು ಇನ್ನೊಂದು ವಿಶೇಷ.

ಶೈಲಜಾ ಪ್ರಕಾಶ್ ಅವರ ‘ಎಸ್ ಪಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಚಿತ್ರಕ್ಕೆ ‘ವೇದಿಕೆ ಕೊಸ್ಮೋಸ್’ ಸಂಸ್ಥೆಯೂ ಕೈ ಜೋಡಿಸಿದೆ. ಈಗಾಗಲೇ ಸಿನಿಮಾದ 70 ಶೇಕಡದಷ್ಟು ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗ ಸಂಪೂರ್ಣ ಕೆಲಸಗಳನ್ನು ಮುಗಿಸುವ ಭರದಲ್ಲಿದೆ ಚಿತ್ರತಂಡ. ಸಿನಿಮಾದ ಛಾಯಾಗ್ರಾಹಕರಾಗಿ ಅನಂದ್ ಇಳಯರಾಜ ಅವರು ಕೆಲಸ ಮಾಡಿದ್ದು, ದಿಲೀಪ್ ಕುಮಾರ್ ಅವರ ಸಾಹಿತ್ಯಕ್ಕೆ ಹರ್ಷ ಕೊಗೋಡ್ ಅವರು ಸಂಗೀತ ತುಂಬಿದ್ದಾರೆ. ಇನ್ನೂ ಎಡಿಟರ್ ಆಗಿ ವೇಧಿಕ್ ವೀರ ಹಾಗು ಕಲರಿಸ್ಟ್ ಆಗಿ ಕಮಲ್ ಗೊಯಲ್ ಅವರು ತಮ್ಮ ಕೈಚಳಕ ತೋರಿಸಲಿದ್ದಾರೆ. ಮಾಸ್ಟರ್ ಹರಿಕೃಷ್ಣ, ಶಂಕರ್ ಜಗನ್ನಾಥ್, ಅನಿಕಾ ರಮ್ಯಾ, ರಾಜು ಬೈ, ಮಾಣಿಕ್ಯ ಜಿ ಎನ್, ವಿಕ್ರಾಂತ್ ಅರಸ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ನಿರ್ದೇಶಕ ರಂಜಿತ್ ಕುಮಾರ್ ಗೌಡ ಈ ‘ರೂಬಿಕ್ಸ್’ ಸಿನಿಮಾದ ಜೊತೆಗೆ ಲೂಸ್ ಮಾದ ಯೋಗಿ ಅವರ ‘ಕಂಸ’ ಸಿನಿಮಾವನ್ನು ಕೂಡ ನಿರ್ದೇಶನ ಮಾಡಲಿದ್ದು, ಈ ಚಿತ್ರದ ಕೆಲಸಗಳ ಜೊತೆ-ಜೊತೆಗೆ ‘ಕಂಸ’ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲೂ ನಿರತರಾಗಿದ್ದಾರೆ. ಶೀಘ್ರದಲ್ಲೇ ‘ರೂಬಿಕ್ಸ್’ ಸಿನಿಮಾ ತನ್ನ ಚಿತ್ರೀಕರಣ ಪೂರ್ಣಗೊಳಿಸಲಿದೆ.

Scroll to Top
Share via
Copy link
Powered by Social Snap