Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ವಿಭಿನ್ನ ಸಿನಿಮಾದಲ್ಲಿ ನಟಿಸಲಿದ್ದಾರೆ ನೀನಾಸಂ ಸತೀಶ್

ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಸತೀಶ್ ನೀನಾಸಂ ಈಗ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲೂಸಿಯಾ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಹೊಸ ಛಾಪು ಮೂಡಿಸಿರುವ ನೀನಾಸಂ ಸತೀಶ್ ಸದ್ಯ ಕನ್ನಡ ಸಿನಿಮಾ ರಂಗದ ಬ್ಯುಸಿ ನಟರಲ್ಲಿ ಒಬ್ಬರು ಹೌದು. ಇಂತಿಪ್ಪ ಸತೀಶ್ ಈಗ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

ಲೈಫು ಇಷ್ಟೇನೆ, ಪಂಚರಂಗಿ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸತೀಶ್ ಅವರಿಗೆ ಲೂಸಿಯಾ ಚಿತ್ರ ಬ್ರೇಕ್ ನೀಡಿತು. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವ ನೀನಾಸಂ ಸತೀಶ್ ಈಗ 80ರ ದಶಕದ ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹೌದು, ತನ್ನ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ಸತೀಶ್ ಅವರು ನಟಿಸುತ್ತಿದ್ದು ಇದೇ ತಿಂಗಳ 15ಕ್ಕೆ ಚಿತ್ರದ ಟೈಟಲ್ ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಒಂದು ಜನಾಂಗದ ನಾಯಕನಾಗಿ ಆ ಜನಾಂಗದ ಒಳಿತಿಗಾಗಿ ಹೋರಾಡುವ ನಾಯಕನ ಪಾತ್ರದಲ್ಲಿ ಸತೀಶ್ ನಟಿಸಲಿದ್ದಾರೆ. ಈ ಸಿನಿಮಾವನ್ನು ವಿನೋದ್ ವಿ ಧೋಂಡಾಳೆ ನಿರ್ದೇಶನ ಮಾಡುತ್ತಿದ್ದು ನರಹರಿ ನಿರ್ಮಾಣ ಮಾಡುತ್ತಿದ್ದಾರೆ. ಪೂರ್ಣ ಅವರ ಸಂಗೀತ ಹಾಗೂ ಟಿ.ಕೆ ದಯಾನಂದ ಅವರ ಚಿತ್ರ ಕಥೆ ಇರಲಿದೆ‌.

Related posts

ಕ್ರೇಜಿ ಸ್ಟಾರ್ ಮಗನ ‘ಪ್ರೀ-ರಿಲೀಸ್’ ಇವೆಂಟ್

Nikita Agrawal

ಡಾಕ್ಟರ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಮುಗುಳುನಗೆ ಹುಡುಗಿ

Nikita Agrawal

ಅಪ್ಪನ‌‌ ಹಾದಿ ಹಿಡಿದ ಡೈನಾಮಿಕ್ ಪ್ರಿನ್ಸ್ !

Nikita Agrawal

Leave a Comment

Share via
Copy link
Powered by Social Snap