Karnataka Bhagya
Blogಅಂಕಣ

ನಿವೇದಿತಾ ಗೌಡ ಈಗ ಮಿಸಸ್ ಇಂಡಿಯಾ

ಸಿನಿಮಾದಲ್ಲಿ ನಟಿಸದ ನಿವೇದಿತಾ ಗೌಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಇದರ ಜೊತೆಗೆ ಇತ್ತೀಚೆಗೆ ನಿವೇದಿತಾ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದರು.
ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿವೇದಿತಾ ಮಿಸೆಸ್ ಇಂಡಿಯಾಗಾಗಿ ತಾನು ನಡೆಸುತ್ತಿರುವ ತಯಾರಿ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು.

ಇದೀಗ ನಟಿ ಮಿಸಸ್ ಇಂಡಿಯಾ ಕಿರೀಟವನ್ನು ತನ್ನದಾಗಿಸುವುದರೊಂದಿಗೆ ಹೊಸ ದಾಖಲೆಯನ್ನು ತನಗಾಗಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಿವೇದಿತಾ ಅವರ ಅಭಿಮಾನಿ ಬಳಗವೂ ಅಷ್ಟೇ ದೊಡ್ಡದಿದೆ. ಆದ್ದರಿಂದ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಏನೇ ಮಾಡಿದರೂ ಬೇಗ ವೈರಲ್ ಆಗಿಬಿಡುತ್ತದೆ. ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿ ಆಗುವ ಬಗ್ಗೆಯೂ ಇವರು ಹೇಳಿಕೊಂಡಿದ್ದರು. ಜೊತೆಗೆ ಈ ಬಗ್ಗೆ ಪುಟ್ಟ ವಿಡಿಯೋ ಒಂದನ್ನೂ ಹಂಚಿಕೊಂಡಿದ್ದರು.

ಇದೀಗ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ‘ವಿನ್ನರ್ ಆಫ್ ಪೀಪಲ್ಸ್ ಚಾಯ್ಸ್ 2022 ಆಫ್ Mrs.ಇಂಡಿಯಾ’ ಎನ್ನುವ ಬಿರುದನ್ನು ನಿವೇದಿತಾ ಮುಡಿಗೇರಿಸಿಕೊಂಡಿದ್ದು, ಜನರ ಆಯ್ಕೆಯ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Mrs.ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಅಲ್ಲದೆ ‘ಕೊನೆಯದಾಗಿ, ಜನರ ಹೃದಯವನ್ನು ಗೆದ್ದು, ಯಾವುದಾದರೂ ಒಂದು ರೀತಿಯಲ್ಲಿ ನಾವು ಅವರ ಮನ ಮುಟ್ಟುವುದೇ ನಿಜವಾದ ಸಾಧನೆ ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‌ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ತಮ್ಮ ಉಪಸ್ಥಿತಿಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ’ ಎಂದು ಸಂಸ್ಥೆ ಕೂಡ ಸಂದೇಶ ಬರೆದುಕೊಂಡಿದೆ.
ಕ್ಯಾಟ್ ವಾಕ್ ಮಾಡುವುದರಿಂದ ಹಿಡಿದು, ಸ್ಟೈಲಿಶ್ ಮ್ಯಾನರಿಸಂ ಸೇರಿದಂತೆ ಹಲವು ವಿಚಾರಗಳಲ್ಲಿ ಟ್ರೈನಿಂಗ್ ಪಡೆದುಕೊಂಡು ಮಿಸ್ಸೆಸ್ ಇಂಡಿಯಾ ಗಾಗಿ ಭರ್ಜರಿ ತಯಾರಿ ನಡೆಸಿದ ನಿವೇದಿತಾ ಗೌಡ ಇದಕ್ಕಾಗಿ ಹಲವು ಫೋಟೊಶೂಟ್ ಗಳನ್ನು ಕೂಡ ಮಾಡಿಸಿದ್ದರು.

ಮಿಸಸ್ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿರುವ ನಿವೇದಿತಾ ಗೌಡ ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಲ್ಲಿದೆ.

Related posts

ಪೇಟಾ ಇಂಡಿಯಾ ದಿಂದ ಪ್ರಶಸ್ತಿ ಪಡೆದ ಪೂಜಾ ಭಟ್… ಯಾಕೆ ಗೊತ್ತಾ?

Nikita Agrawal

ಬಿಡುಗಡೆಯಾಗಿ 3ವರ್ಷವಾದರೂ ದಾಖಲೆ ನಿಲ್ಲಿಸದ ಕೆಜಿಎಫ್ ಸಿನಿಮಾ

Nikita Agrawal

ಸಹೋದರನ ಅಗಲಿಕೆ ನೋವಲ್ಲಿಯೂ ನಿರ್ಮಾಪಕರಿಗೆ ಬೆಂಬಲವಾಗಿ ನಿಂತ ಶಿವಣ್ಣ

Karnatakabhagya

Leave a Comment

Share via
Copy link
Powered by Social Snap