33.1 C
Bengaluru
May 14, 2026
Karnataka Bhagya
Blogಕರ್ನಾಟಕ

ಸ್ಯಾಂಡಲ್ ವುಡ್ ನಲ್ಲಿ , ನಾಯಿ ಇದೆ ಎಚ್ಚರಿಕೆ !! ಅಬ್ಬರ

ನಾಯಿ ಇದೆ ಎಚ್ಚರಿಕೆ ! ಸಧ್ಯ ಗಾಂಧಿನಗರದಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಸದ್ದು ಮಾಡುತ್ತಿರುವ ವಿಶೇಷ ಮನರಂಜನೆಯ ಚಿತ್ರ …

ಟೈಟಲ್ ಜೊತೆಗೆ ಚಿತ್ರದ ಕಥೆ ಕೂಡ ವಿಭಿನ್ನ ಎನ್ನುವುದು ನಿರ್ದೇಶಕ ಕಲಿಗೌಡರ ಮಾತು , ಈ ಹಿಂದೆ ” ತನಿಖೆ ” ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿರುವ ಕಲಿಗೌಡ ಅವರು ” ನಾಯಿ ಇದೆ ಎಚ್ಚರಿಕೆ !! ” ಚಿತ್ರಕ್ಕೆ ಮತ್ತೆ ಕ್ಯಾಪ್ ತೊಟ್ಟಿದ್ದಾರೆ …

ಹಾಸ್ಯದ ಜೊತೆಗೆ ರೋಮಾಂಚಕಾರಿ ಕಥಾ ಹಂದರವಿರುವ ಚಿತ್ರದಲ್ಲಿ ಮಂಗಳೂರು ದಿನೇಶ್ , ಬಾಲ ರಾಜವಾಡಿ , ನಾಗೇಂದ್ರ ಅರಸು ಸೇರಿದಂತೆ ಮುಖ್ಯ ಪಾತ್ರದಲ್ಲಿ ಲೀಲಾ ಮೋಹನ್ ಪಿವಿಆರ್ ಮತ್ತು ಪ್ರಮುಖ ಪಾತ್ರದಲ್ಲಿ ಪ್ರಬಿಕ್ ಮೊಗವೀರ್ ಕಾಣಿಸಿಕೊಂಡಿದ್ದಾರೆ , ಇನ್ನುಳಿದಂತೆ ದಿವ್ಯ , ಚಂದನ , ಮಾನಸ , ಶ್ರೀನಿ , ಸುನೀಲ್ , ರಿಷಿ , ಯುವ ನಟಿಸಿದ್ದಾರೆ …

ಚಿತ್ರದಲ್ಲಿ ರೂಬಿ ಎನ್ನುವ ನಾಯಿ ನಟಿಸದ್ದು ಚಿತ್ರದ ಕುತೂಹಲವನ್ನು ಇಮ್ಮಡಿಗೊಳಿಸಿದೆ , ಚಿತ್ರಕ್ಕೆ ಅಜಿತ್ ಕುಮಾರ್ ಛಾಯಾಗ್ರಹಣ , ಕ್ರಿಷ್ಟಪರ್ ಜಾಯ್ಸನ್ ಸಂಗೀತ ನೀಡಿದ್ದಾರೆ

ಈಗಾಗಲೇ ಚಿತ್ರದ ಕೊನೆಯ ಹಂತದ ಕೆಲಸಗಳು ನಡೆಯುತ್ತಿದ್ದು ಸಧ್ಯದಲ್ಲಿ ಬಿಡುಗಡೆಯಾಗಲು ಚಿತ್ರ ತಂಡ ತಯಾರಿ ನಡೆಸುತ್ತಿದೆ…

ಪ್ರಬಿಕ್ ಮೊಗವೀರ್ ಮತ್ತು ಲಾವಣ್ಯ ಗಾಧೆ ಚಿತ್ರದ ನಿರ್ಮಾಪಕರಾಗಿದ್ದು ಚಿತ್ರಕ್ಕೆ ಭಂಡವಾಳ ಹೂಡಿದ್ದಾರೆ , ಈಗಾಗಲೇ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ದೊಡ್ಡ ಬೇಡಿಕೆ ಇದೆ ಎನ್ನುವುದು ಚಿತ್ರತಂಡದ ಮಾಹಿತಿ …

Related posts

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿರುವುದಕ್ಕೆ ಕಲಾಪ ಸ್ಥಗಿತವೇ ಉತ್ತರ : ಶ್ರೀಧರ ಸಾಹುಕಾರ

Mahesh Kalal

ನನ್ನ ಹಿರಿತೆರೆ ಪಯಣ ಶುರುವಾಗಿದ್ದು ಪಿ ಆರ್ ಕೆ ಪ್ರೊಡಕ್ಷನ್ ನಿಂದ – ಶ್ರುತಿ ರಮೇಶ್

Nikita Agrawal

ಬಡ, ಪ್ರತಿಭಾವಂತ ಮಕ್ಕಳು ಮೆಡಿಕಲ್ ಓದಬೇಕನ್ನುವುದು ನನ್ನಾಸೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್

Mahesh Kalal

Leave a Comment

Share via
Copy link
Powered by Social Snap