‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಅಭಿನಯದ ಅತೀ ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ತೆರೆಮೇಲೆ ಬರೋ ದಿನಾಂಕkke ದಿನಗಣನೆ ನಡೆಯುತ್ತಿದೆ. ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ಭರದಲ್ಲಿದೆ ಚಿತ್ರತಂಡ. ಅದೇ ನಿಟ್ಟಿನಲ್ಲಿ ಸುದ್ದಿಗೋಷ್ಠಿಗಳು, ಯೂಟ್ಯೂಬ್ ಇಂಟರ್ವ್ಯೂಗಳು, ಹಾಡುಗಳು ಮುಂತಾದವು ನಡೆಯುತ್ತಿವೆ. ಇದೀಗ ಹೊಸ ಹಾಡೊಂದನ್ನು ಬಿಡಲು ಚಿತ್ರತಂಡ ನಿರ್ಧರಿಸಿದ್ದು, ‘ಗುಮ್ಮ ಬಂದ ಗುಮ್ಮ’ ಎಂಬ ಈ ಹಾಡು ಸಿನಿಮಾದಿಂದ ಹೊರಹೋಮ್ಮವ ಬಹುನಿರೀಕ್ಷಿತ ಹಾಡುಗಳಲ್ಲಿ ಒಂದಾಗಿತ್ತು.
‘ವಿಕ್ರಾಂತ್ ರೋಣ’ ಸಿನಿಮಾ ಆರಂಭದಿಂದ ಎಲ್ಲೆಡೆ ಕೇಳಿಬರುತ್ತಿದ್ದ ಒಂದು ಪದ ‘ಗುಮ್ಮ’. ಅನೂಪ್ ಭಂಡಾರಿಯವರ ಮೊದಲ ಚಿತ್ರ ಪ್ರಖ್ಯಾತ ‘ರಂಗಿತರಂಗ’ ಕೂಡ ‘ಗುಡ್ಡದ ಭೂತ’ ಎಂಬ ಅಂಶವನ್ನೇ ತನ್ನ ಜೀವಾಳವಾಗಿಟ್ಟುಕೊಂಡಿತ್ತು. ಅವರೇ ಹೇಳುವ ಹಾಗೇ ಮಿಸ್ಟರಿ, ನಿಗೂಢತೆ ಇಂತಹದ್ದೆಲ್ಲ ಅವರಿಗೆ ಬಹು ಇಷ್ಟವಾಗಿರುವುದರಿಂದ ‘ವಿಕ್ರಾಂತ್ ರೋಣ’ ಕೂಡ ಇಂತಹದ್ದೇ ಒಂದು ಹಿನ್ನೆಲೆಯಲ್ಲಿ ಮೂಡಿಬಂದಿದೆ ಎಂಬುದನ್ನು ಎಲ್ಲರೂ ಊಹಿಸಬಹುದು. ಅದಕ್ಕೇ ಸಾಕ್ಷಿಯೇ ಈ ‘ಗುಮ್ಮ ಬಂದ ಗುಮ್ಮ’ ಯಾನೆ ‘ಡೆವಿಲ್ಸ್ ಫ್ಯೂರಿ’ ಹಾಡು. ಇದೇ ಜುಲೈ 21ರಂದು ಬೆಳಿಗ್ಗೆ 11:05ಕ್ಕೆ ಹಾಡು ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಈ ಹಾಡಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಕೊರೋನ ನಂತರ ‘ವಿಕ್ರಾಂt ರೋಣ’ನ ಚಿತ್ರೀಕರಣ ಆರಂಭವಾದಾಗ ಸುದೀಪ್ ಅವರು ಚಿತ್ರತಂಡದ ಪರವಾಗಿ ‘ಫಾಂಟಮ್’ನ ಪ್ರಪಂಚ ಎಂಬಂತೆ ಸಣ್ಣ ದೃಶ್ಯಗಳಿರುವ ಎರಡು ಮೂರು ಮೇಕಿಂಗ್ ವಿಡಿಯೋ ರೀತಿಯದ್ದನ್ನು ಬಿಡುಗಡೆಗೊಳಿಸಿದ್ದರು.ಅದರಲ್ಲಿ ಕೇಳಲು ಸಿಕ್ಕ ಹಿನ್ನೆಲೆ ಸಂಗೀತ ಎಲ್ಲರ ಮೈ-ನವೀರೇಳಿಸಿತ್ತು. ಸದ್ಯ ಆ ಸಂಗೀತವೇ ‘ಡೆವಿಲ್ಸ್ ಫ್ಯೂರಿ’ ಎಂದು ಹೆಸರಿಡಲಾಗಿರುವ ಈ ‘ಗುಮ್ಮ ಬಂದ ಗುಮ್ಮ’ ಹಾಡು ಎನ್ನಲಾಗುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಹಾಡಿನಲ್ಲಿರಲಿದ್ದು, ಹರ್ಷಿಕಾ ದೇವನಾಥ್ ಅವರು ಹಾಡಿಗೆ ಧ್ವನಿಯಗಿದ್ದಾರೆ.