2017ರಲ್ಲಿ ಬಿಡುಗಡೆಯಾದ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟಿ ಆಕಾಂಕ್ಷಾ ಸಿಂಗ್ ನಂತರ ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲಿ ನಟಿಸಿದರು.
ಅಜಯ್ ದೇವಗನ್ ರಾಕುಲ್ ಪ್ರೀತ್ ನಟನೆಯ ರನ್ ವೇ 34 ಚಿತ್ರದಲ್ಲಿ ನಟಿಸಿರುವ ಆಕಾಂಕ್ಷಾ ಬೇರೆ ನಟಿಯರಂತೆ ಒಂದೇ ಚಿತ್ರರಂಗದಲ್ಲಿ ನಟಿಸದೇ ಬೇರೆ ಚಿತ್ರರಂಗದಲ್ಲಿಯೂ ನಟಿಸುವ ಆಸೆ ಹೊಂದಿದ್ದಾರೆ.
“ನಾನು ನಟಿ ಹಾಗೂ ಬೇರೆ ಭಾಷೆಗಳಲ್ಲಿ ನಟಿಸುತ್ತೇನೆ. ವಿವಿಧ ಭಾಷೆಗಳಲ್ಲಿ ತುಂಬಾ ಜನರು ನನಗೆ ಅವಕಾಶಗಳನ್ನು ನೀಡುತ್ತಿದ್ದಾರೆ. ಹೀಗಾಗಿ ನಾನ್ಯಾಕೆ ಈ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಲಿ? ನಾನು ಒಳ್ಳೆಯ ಕೆಲಸ ಮಾಡಲು ಬಯಸುತ್ತೇನೆ. ನನಗೆ ಬೇರೆ ಭಾಷೆಗಳಲ್ಲಿ ಇದು ಸಿಕ್ಕಿದರೆ ನಾನ್ಯಾಕೆ ಬಿಡಲಿ? ಜನ ನೀವು ಒಳ್ಳೆ ಕಥೆ ಹಾಗೂ ಪಾತ್ರ ಮಾಡುತ್ತಿದ್ದೀರಿ ಎಂದು ಹೇಳಿ ನನ್ನನ್ನು ಹೊಗಳಿದಾಗ ಇಷ್ಟಪಡುತ್ತೇನೆ”ಎಂದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ಆಕಾಂಕ್ಷಾ ಸಿಂಗ್ 2012ರಲ್ಲಿ “ನಾ ಬೋಲೆ ತುಮ್ ನ ಮೈನೇ ಕುಚ್ ಕಹಾ”ಧಾರಾವಾಹಿ ಮೂಲಕ ಕೆರಿಯರ್ ಆರಂಭಿಸಿದರು. “ಹತ್ತು ವರ್ಷಗಳು ಕಳೆದಿದೆ ಎಂದು ಅನಿಸುವುದಿಲ್ಲ. ಕುಳಿತು ಹಿಂದಿನ ಘಟನೆಗಳನ್ನು ನೆನಪಿಸಿದಾಗ ನಟಿಯಾಗಿ ಬೆಳೆದಿರುವ ಬಗ್ಗೆ ಖುಷಿಯಾಗುತ್ತದೆ. ಉತ್ತಮ ಪಾತ್ರಗಳತ್ತ ನೋಡುತ್ತಿರುವೆ. ಅವಕಾಶಗಳತ್ತ ನೋಡುತ್ತಿದ್ದೇನೆ” ಎಂದಿದ್ದಾರೆ.