ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನಟಿ ಪಾವನಾ ಗೌಡ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ ಹೌದು ಪಾವನಾ ಗೌಡ ಅಭಿನಯದ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ
ಚಿತ್ರಕ್ಕೆ ಇನ್ ಎಂದು ಹೆಸರಿಡಲಾಗಿದ್ದು ಸದ್ಯ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದೆ…ಬಡಿಗೇರ ದೇವೇಂದ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಈ ಹಿಂದೆ ರ ರುದ್ರಿ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ರು ನಿರ್ದೇಶಕರು …ಲಾಕ್ ಡೌನ್ ಸಂದರ್ಭವನ್ನೇ ವಸ್ತುವಾಗಿಟ್ಟುಕೊಂಡು ಒಂಟಿ ಮನೆ, ಒಬ್ಬಳೇ ಯುವತಿಯ ಜೀವನದ ಕುರಿತು ಪ್ರಯೋಗಾತ್ಮಕ ಸವಾಲಿನ ಚಿತ್ರ ನಿರ್ದೇಶನ ಮಾಡಿದ್ದಾರೆ ದೇವೇಂದ್ರ.ಕರುಣಾಕರ ಟಿ ಎನ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಭರತ್ ನಾಯಕ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ …
ಸದ್ಯ ಈ ಸಿನಿಮಾದ ಪೋಸ್ಟರ್ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದ್ದು ಸಿನಿಮಾ ಹೇಗೆ ಮೂಡಿಬರಲಿದೆ ಅನ್ನುವ ಕಾತುರದಲ್ಲಿ ಪ್ರೇಕ್ಷಕರು ಕಾದಿದ್ದಾರೆ…ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವ್ರು ಚಿತ್ರದ ಪೋಸ್ಟರ್ ರಿವಿಲ್ ಮಾಡಿ ಚಿತ್ರತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ…