Karnataka Bhagya

“ರೇಮೊ” ಟೀಸರ್ ಅಭಿಮಾನಿಗಳ ಮುಂದೆ..

ಗೂಗ್ಲಿ ಖ್ಯಾತಿಯ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರೋಗ್ ಸಿನಿಮಾ ಖ್ಯಾತಿಯ ಇಶಾನ್ ನಾಯಕ ನಟರಾಗಿ ಹಾಗೂ ಆಶಿಕಾ ರಂಗನಾಥ್ ನಾಯಕನಟಿಯಾಗಿ ಅಭಿನಯಿಸಿರುವ, ಬಹುಭಾಷಾ ನಟ ಶರತ್ ಕುಮಾರ್, ಅಚ್ಯುತ್ ಕುಮಾರ್, ರಾಜೇಶ್ ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾ ರೇಮೊ ಟೀಸರ್ ಅನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ.

ಚಿತ್ರದ ನಿರ್ಮಾಪಕರು ವಜ್ರಕಾಯ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಸಿ. ಆರ್ ಮನೋಹರ್ ರವರು.ಇವರ ನಿರ್ಮಾಣದಲ್ಲಿ ಕನ್ನಡ, ತೆಲುಗು ಭಾಷೆಯಲ್ಲಿ ಹಲವು ಸಿನಿಮಾಗಳು ಬಂದಿವೆ.

ಇನ್ನು ರೇಮೊ ಚಿತ್ರಕ್ಕೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ರೇಮೊ ಚಿತ್ರ ಒಂದು ರೊಮ್ಯಾಂಟಿಕ್ ಆಕ್ಷನ್ ಮನೋನಂಜನೆ ನೀಡುವ ಚಿತ್ರವಾಗಿದೆ.

ಇಂದು ಟೀಸರ್ ಬಿಡುಗಡೆಯಾಗಿದೆ ಹಾಗೂ ಚಿತ್ರವನ್ನು ಡಿಸೆಂಬರ್ 26, 2021 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

All the best for “RAYMO”Team.

Scroll to Top
Share via
Copy link
Powered by Social Snap