Karnataka Bhagya
Blogಇತರೆ

ಹಿರಿತೆರೆ ಏರಿರೋ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆ ಪ್ರವೇಶ!!

‘ನೀರ್ದೋಸೆ’ ಎಲ್ಲರ ಮೆಚ್ಚುಗೆಯ ಮೇಲೆಯೇ ಸೂಪರ್ ಹಿಟ್ ಆದ ಸಿನಿಮಾ. ಹಲವು ತರಲೆಯುಳ್ಳ ಮಾತುಗಳ ಮೂಲಕ ಜೀವನದ ಕೆಲವು ಮುಖ್ಯ ನೀತಿಗಳನ್ನ ಹೇಳುವಂತಹ ಪ್ರಯತ್ನ ‘ನೀರ್ದೋಸೆ’ಯ ಮೂಲಕ ಮಾಡಲಾಗಿತ್ತು. ಅದೇ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರು ಮಾಡಿದ ಮುಂದಿನ ಸಿನಿಮಾ ‘ಪೆಟ್ರೋಮ್ಯಾಕ್ಸ್’. ಸತೀಶ್ ನೀನಾಸಂ ನಾಯಕರಾಗಿ ನಟಿಸಿರುವ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಇದೀಗ ಸಿನಿಮಾದ ಡಿಜಿಟಲ್ ಹಾಗು ಸಾಟೆಲೈಟ್ ಹಕ್ಕುಗಳ ಮಾರಾಟದ ಬಗೆಗೆ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಚಿತ್ರ ಯಾವ ಒಟಿಟಿಯಲ್ಲಿ ಬರಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸತೀಶ್ ನೀನಾಸಂ ಅವರ ಜೊತೆ, ನಾಗಭೂಷಣ, ಹರಿಪ್ರಿಯಾ, ಕಾರುಣ್ಯ ರಾಮ್ ಹಾಗು ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿರೋ ಈ ಸಿನಿಮಾ ಇದೇ ಜುಲೈ 15ರಂದು ತೆರೆಕಂಡಿತ್ತು. ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳನ್ನ ಪಡೆಯುತ್ತಾ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ ‘ಪೆಟ್ರೋಮ್ಯಾಕ್ಸ್’. ಈ ನಡುವೆ ‘ಪೆಟ್ರೋಮ್ಯಾಕ್ಸ್’ನ ಸಾಟೆಲೈಟ್ ಹಕ್ಕುಗಳನ್ನು ಕಲರ್ಸ್ ಕನ್ನಡ ಹಾಗು ಡಿಜಿಟಲ್ ಹಕ್ಕುಗಳನ್ನು ‘ವೂಟ್’ ಕೊಂಡುಕೊಂಡಿವೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಹಾಗಾಗಿ ಬೆಳ್ಳಿತೆರೆಯ ನಂತರ ಕಲರ್ಸ್ ಕನ್ನಡ ಹಾಗು ವೂಟ್ ಆಪ್ ಗಳ ಮೂಲಕ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆಯ ಪಯಣ ಮುಂದುವರೆಯಲಿದೆ ಎಂಬ ವಿಷಯ ಖಾತ್ರಿಯಾಗಿದೆ. ಸದ್ಯ ದಿನಾಂಕವನ್ನ ಇನ್ನು ಹೊರಹಾಕದಿರುವುದರಿಂದ, ಕಾದು ನೋಡಬೇಕಿದೆ.

Related posts

ಪುಷ್ಪ‌ ಚಿತ್ರದ ಸಮಂತಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ

Nikita Agrawal

ಸೋಷಿಯಲ್ ಮಿಡಿಯಾದಲ್ಲಿ ಕಮಲಿ ಹವಾ ಜೋರು

Nikita Agrawal

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?

Nikita Agrawal

Leave a Comment

Share via
Copy link
Powered by Social Snap