ಪ್ರಜ್ವಲ್‌ದೇವರಾಜ್ ಒಂದರ ನಂತರ ಮತ್ತೋಂದು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿ ಆಗಿರೋ ಡೈನಾಮಿಲ್ ಪ್ರಿನ್ಸ್ ಚಿತ್ರಗಳ ಸಾಲಿಗೆ ಹೆಸರಿಡದ ಚಿತ್ರವೊಂದನ್ನು ಸೇರಿಕೊಂಡಿದೆ…
ಮಂಗಳವಾರ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸಮಾರಂಭವು ಸರಳವಾಗಿ ನಡೆದಿದೆ…ಚಿತ್ರವನ್ನು ಫಿಲ್ಮಿ ಫೆಲೋ ಸ್ಟುಡಿಯೋಸ್ ಅರ್ಪಿಸುತ್ತಿದ್ದು, ಆಲ್ ಓಶನ್ ಮಿಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ‍್ಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ…
ಬಾಲಿವುಡ್‌ನ ಅಧಿರ್‌ಭಟ್ ಬರೆದಿರುವ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಕಥೆಗೆ ಪನ್ನಗಭರಣ ನಿರ್ದೇಶನ ಮಾಡುತ್ತಿದ್ದಾರೆ.. ಇದೇ ಮೊದಲಬಾರಿ ಪ್ರಜ್ವಲ್‌ದೇವರಾಜ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪ್ರಜ್ವಲ್ ’ಮಾಫಿಯಾ’, ’ಗಣ’ ಚಿತ್ರಗಳಲ್ಲಿ ತೊಡಗಿಕೊಂಡಿದ್ದು, ಇವುಗಳನ್ನು ಮುಗಿಸಿದ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಂಗೀತ ವಾಸುಕಿವೈಭವ್, ಛಾಯಾಗ್ರಹಣ ವಿರಾಜ್‌ಸಿಂಗ್, ಕಾರ್ಯಕಾರಿ ನಿರ್ಮಾಪಕರಾಗಿ ಪ್ರವೀಣ್‌ಯಾದವ್ ಅವರು ನಿರ್ವಹಿಸುತ್ತಿದ್ದಾರೆ.