ನಟ ಪ್ರಕಾಶ್ ರಾಜ್ ಏನೇ ಮಾಡಿದರೂ, ಏನೇ ಹೇಳಿದರೂ ವಿವಾದವಾಗಿ ಬಿಡುತ್ತದೆ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ವಿವಾದಗಳನ್ನು ಹುಟ್ಟು ಹಾಕುವ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರಣ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಪ್ರಕಾಶ್ ರಾಜ್ ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ಬಾರಿ ಪ್ರಕಾಶ್ ಉತ್ತಮವಾದ ವಿಚಾರ ಹಂಚಿಕೊಂಡಿದ್ದಾರೆ. ಅಪ್ಪು ಹೆಸರಿನಲ್ಲಿ ಹೊಸ ಯೋಜನೆ ಒಂದನ್ನು ಕೈಗೊಂಡಿದ್ದು ಹುಟ್ಟು ಹಬ್ಬದ ಅಂಗವಾಗಿ ಈ ವಿಚಾರ ಹಂಚಿಕೊಂಡಿದ್ದಾರೆ.
“ಅಪ್ಪು ಎಕ್ಸ್ ಪ್ರೆಸ್ ” ಎನ್ನುವ ಹೊಸ ಯೋಜನೆಯನ್ನು ಪ್ರಕಾಶ್ ರಾಜ್ ಆರಂಭಿಸಿದ್ದಾರೆ. ತಮ್ಮ ಫೌಂಡೇಶನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಯೋಜನೆ ಹಾಕಿಕೊಂಡಿರುವ ಪ್ರಕಾಶ್ ರಾಜ್ ಇದೀಗ ಅಪ್ಪು ಹೆಸರಿನಲ್ಲಿ ಮತ್ತೊಂದು ಯೋಜನೆ ಶುರು ಮಾಡಿದ್ದಾರೆ. ಈ ಫೌಂಡೇಶನ್ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಂಡಿದ್ದಾರೆ.
ಅಪ್ಪು ಎಕ್ಸ್ ಪ್ರೆಸ್ ಎಂಬ ಯೋಜನೆ ಆರಂಭಿಸಿರುವ ಪ್ರಕಾಶ್ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. “ನನ್ನ ದಿನವಾದ ಈ ದಿನದಂದು ಈ ಸುದ್ದಿಯನ್ನು ಹಂಚಿಕೊಳ್ಳಲು ಸಂತಸಪಡುತ್ತೇನೆ. ಪ್ರಕಾಶ್ ರಾಜ್ ನೇತೃತ್ವದಲ್ಲಿ “ಹಿಂದಿರುಗಿಸೋಣ” ಎಂದು ಬರೆದುಕೊಂಡಿದ್ದಾರೆ. ಅಪ್ಪು ಎಕ್ಸ್ ಪ್ರೆಸ್ ಯೋಜನೆಯ ಬಗ್ಗೆ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಪ್ರಕಾಶ್ ರಾಜ್ ಅವರಿಗೆ ತುಂಬಾ ನೋವುಂಟು ಮಾಡಿತ್ತು. ವಿಡಿಯೋ ಮೂಲಕ ನೋವು ಹಂಚಿಕೊಂಡಿದ್ದರು. ಅಪ್ಪು ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ರಾಜ್ ಪುನೀತ್ ಅವರನ್ನು ಹೊಗಳಿದ್ದರು. ಅಪ್ಪು ಎಕ್ಸ್ ಪ್ರೆಸ್ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಇನ್ನೂ ತಿಳಿಯಬೇಕಷ್ಟೆ.