ದಕ್ಷಿಣ ಭಾರತದ ಖ್ಯಾತ ನಟಿ ಪ್ರಣೀತಾ ಸುಭಾಷ್ ಯುಎಇ ಯಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಈ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. “ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ” ಎಂದು ಪೋಸ್ಟ್ ಮಾಡಿದ್ದು ಈ ಸುದ್ದಿ ಕೇಳಿ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.


ಯುನೈಟೆಡ್ ಅರಬ್ ಎಮಿರೇಟ್ಸ್ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸು, ಕೆಲಸ ಮಾಡುವ ಅಥವಾ ಓದುವ ಅವಕಾಶಗಳು ಇರುತ್ತದೆ. ಈ ಗೌರವವನ್ನು ಕನ್ನಡತಿ ನಟಿ ಪ್ರಣೀತಾ ಪಡೆದಿರುವುದು ಹೆಮ್ಮೆಯ ಸಂಗತಿ.

ದರ್ಶನ್ ನಟನೆಯ ಪೊರ್ಕಿ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಪ್ರಣೀತಾ ಸುಭಾಷ್ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಜನರಿಗೆ ಸಹಾಯ ಮಾಡಿದ್ದರು. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಪ್ರಣೀತಾ ಅವರಿಗೆ ಈ ಗೌರವ ದೊರಕಿದ್ದು ಸಂತಸದ ವಿಚಾರ. ಸೌತ್ ನ ನಟಿಯರಾದ ತ್ರಿಶಾ, ಕಾಜಲ್ ಅಗರವಾಲ್ ಕೂಡಾ ಈ ಹಿಂದೆ
ಗೋಲ್ಡನ್ ವೀಸಾ ಪಡೆದುಕೊಂಡಿದ್ದರು.
