ಸೆಲೆಬ್ರಿಟಿಗಳು ಇತರ ಸೆಲೆಬ್ರಿಟಿಗಳಿಂದ ಸ್ಪೂರ್ತಿ ಪಡೆಯುವುದು ಸರ್ವೇ ಸಾಮಾನ್ಯವಾದ ಸಂಗತಿ. ಇನ್ನು ಇದರ ಹೊರತಾಗಿ ಇಬ್ಬರು ಸೆಲೆಬ್ರಿಟಿಗಳನ್ನು ಒಂದೇ ತರಹದ ಔಟ್ ಫಿಟ್ ನಲ್ಲಿ ಭಿನ್ನವಾದ ಸ್ಟೈಲಿನಲ್ಲಿ ನೋಡಲು ಚೆಂದ. ಕನ್ನಡದ ಸೆಲೆಬ್ರಿಟಿಗಳು ಕೂಡಾ ಇದಕ್ಕೆ ಹೊರತಾಗಿಲ್ಲ.
ಕಿರುತೆರೆಯಲ್ಲಿ ಮನೆ ಮಾತಾಗಿರುವ ಪ್ರಥಮ ಪ್ರಸಾದ್ ಅವರು ತಮ್ಮ ಹೊಸ ಅವತಾರದ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅದರಲ್ಲಿ ವಿಶೇಷ ಏನಪ್ಪಾ ಅಂಥ ಅಂದ್ರೆ ಪ್ರಥಮಾ ಪ್ರಸಾದ್ ಅವರು ತಮ್ಮ ತಾಯಿ ವಿನಯ ಪ್ರಸಾದ್ ಅವರ ನೀನು ನಕ್ಕರೆ ಹಾಲು ಸಕ್ಕರೆ ಚಿತ್ರದ “ಬಾರೆ ಸಂತೆಗೆ ಹೋಗೋಣ ಬಾ” ಹಾಡಿನ ಲುಕ್ ನಲ್ಲಿ ಮಿಂಚಿದ್ದಾರೆ.
ವಿನಯ ಪ್ರಸಾದ್ ಈ ಹಾಡಿನಲ್ಲಿ ಪಿಂಕ್ ಲೆಹೆಂಗಾ ಹಾಗೂ ಬಿಳಿ ದಾವಣಿಯಲ್ಲಿ ಕಾಣಿಸಿಕೊಂಡಿದ್ದರು. ಪ್ರಥಮ ಪ್ರಸಾದ್ ಕೂಡಾ ಇದೇ ತರಹ ಕಾಸ್ಟ್ಯೂಮ್ ಧರಿಸಿದ್ದಾರೆ. ಲಂಗ ದಾವಣಿಯಿಂದ ಹಿಡಿದು ಜಡೆ, ಸನ್ ಗ್ಲಾಸ್, ಮೇಕಪ್ ವರೆಗೂ ಅಮ್ಮನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ವಿನಯಾ ಪ್ರಸಾದ್ ಕೂಡಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.