ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕರ್ತೃ ಕ್ರಿಯಾ ಕರ್ಮ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರು 1980ರ ನಂತರ ಮತ್ತೊಮ್ಮೆ ನಿರ್ದೇಶಕ ರಾಜ್ ಕಿರಣ್ ಜೋಸೆಫ್ ಅವರೊಂದಿಗೆ ಜೊತೆಯಾಗಲಿದ್ದಾರೆ.
ಈ ಮೊದಲು ‘ಉಗ್ರಾವತಾರ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕ ಉಪೇಂದ್ರ “ನಾನು ಪೊಲೀಸ್ ವಿಭಾಗದ ಉನ್ನತ ಇಲಾಖೆಯಲ್ಲಿ ಕೆಲಸ ಮಾಡುವ ವಿಶೇಷ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರವು ತುಂಬ ಸವಾಲಿನಿಂದ ಕೂಡಿದೆ. ನಾನು ಸಮವಸ್ತ್ರವನ್ನು ಧರಿಸುವುದಿಲ್ಲ ಮತ್ತು ಮೇಕಪ್ ನ್ನು ಮಾಡಿಲ್ಲ. ಚಿತ್ರವು ನೈಜತೆಯಿಂದ ಕೂಡಿದೆ” ಎಂದಿದ್ದಾರೆ ಪ್ರಿಯಾಂಕಾ.
ಇದರ ಜೊತೆಗೆ “ಕಥೆಯು ಸಾಕಷ್ಟು ತಿರುವನ್ನು ಹೊಂದಿದೆಯಲ್ಲದೆ ವಿಭಿನ್ನ ರೀತಿಯ ಆಕ್ಷನ್ ಶೈಲಿಯನ್ನು ಒಳಗೊಂಡಿದೆ. ಕಠಿಣವಾದ ಕಥಾಹಂದರವನ್ನು ಹೊಂದಿರುವಂತಹ ಸಿನಿಮಾ. ಇದಕ್ಕಾಗಿಯೇ ನಾನು ರಾಜ್ ಕಿರಣ್ ಜೊತೆ ಮತ್ತೆ ಜೊತೆಯಾಗಲು ಬಯಸಿದ್ದು. ಅವರು ನಿಜವಾಗಿಯೂ ನನ್ನ ಪಾತ್ರದ ಆಳಕ್ಕೆ ಹೋಗಿದ್ದಾರೆ. ಮುಂದಿನ ತಿಂಗಳಿನಿಂದ ಶೂಟಿಂಗ್ ಆರಂಭಿಸಲು ಕಾತರಳಾಗಿದ್ದೇನೆ” ಎಂದರು.